ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕ್ರಿಕೆಟ್ ವಿಚಾರವಾಗಿ ಸ್ನೇಹಿತರ ಮಧ್ಯೆ ಜಗಳವಾಗಿ ಒಬ್ಬಾತ ನನ್ನು ಹತ್ಯೆ ಮಾಡಲಾಗಿದೆ.ಮತ್ತೋರ್ವ ನಿಗೆ ಗಾಯವಾಗಿದೆ. ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ನಿನ್ನೆ ರಾತ್ರಿ ಘಟನೆ ಸಂಭವಿಸಿದೆ. ಅರುಣ್ (23) ಕೊಲೆಯಾಗಿದ್ದಾನೆ. ಸಂಜಯ್ ಎಂಬಾತ ಗಾಯ ಗೊಂಡಿದ್ದಾನೆ.
ಸೋಮವಾರ ಸಂಜೆ ಕ್ರಿಕೆಟ್ ಆಡಿದ್ದರು.ರಾತ್ರಿ ಮದ್ಯ ಸೇವಿಸುವಾಗ ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು,ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪಾನಮತ್ತರಾಗಿ ರುವ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಎಂದು ಎಸ್ ಪಿ ವಾಟ್ಸಪ್ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.