ಭದ್ರಾವತಿ-ಪೊಲೀಸರ ಮೇಲೆ ಹಲ್ಲೆಗೆ ಯತ್ನ ಆರೋಪಿ ಕಾಲಿಗೆ ಫೈರ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಆರೋಪಿಯೊಬ್ಬನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಮಂಗಳ ವಾರ ನಡೆದಿದೆ. ಕಳೆದ ರಾತ್ರಿ ಕ್ರಿಕೆಟ್ ವಿಚಾರವಾಗಿ ನಡೆದ ಜಗಳದಲ್ಲಿ ಅರುಣ್ ಎಂಬಾತನ ಹತ್ಯೆಯಾಗಿತ್ತು.

ಸೋಮವಾರ ಸಂಜೆ ಕ್ರಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಕೊಲೆ ಘಟನೆಗೆ ಕಾರಣರಾದ ಆರೋಪಿ ಗಳನ್ನು ಪೋಲಿಸರು ಹುಡುಕಾಟ ನಡೆಸಿದಾಗ ಪ್ರಮುಖ ಆರೋಪಿ ಹೊಸಮನೆ ಹನುಮಂತ ನಗರದ ನಿವಾಸಿ ಕೊಕ್ಕೋ ಆಲಿಯಾಸ್ ಕುಮಾರ(19) ತಾಲ್ಲೂಕಿನ ಕಾರೆಹಳ್ಳಿ ಗ್ರಾಮದಲ್ಲಿರುವ ಮಾಹಿತಿ ಆಧಾರದ ಮೆರೆಗೆ ಹೊಸಮನೆ ಪಿ ಎಸ್.ಐ. ಕೃಷ್ಣ ಕುಮಾರ್ ಮಾನೆ ನೇತೃತ್ವದ ತಂಡದ ಜೊತೆಗೆ ಆರೋಪಿಯನ್ನು ಬಂಧಿಸಲು ಸ್ಥಳಕ್ಕೆ ಹೋಗಿದ್ದಾರೆ.

ಆರೋಪಿ ಅರುಣ್ ಕುಮಾರ್ (19) 
ಎಂದು ಗುರುತಿಸಿದ್ದು ಈತನ ವಿರುದ್ಧ ಐದು ಪ್ರಕರಣಗಳಿದ್ದು, ಕೊಲೆ ಕೇಸಿನಲ್ಲಿ A3 ಆರೋಪಿಯಾಗಿದ್ದ. ಈತನನ್ನು ಬಂಧಿಸಲು ಹೋದಾಗ ಪೊಲೀಸ್ ಸಿಬ್ಬಂದಿ ಹನುಮಂತ ಅಮಾಥಿ ಮೇಲೆ ಚಾಕುವಿನ ಹಲ್ಲೆ ನಡೆಸಿ ದ್ದಾನೆ. ಈ ಸಂಧರ್ಭದಲ್ಲಿ ಆತ್ಮರಕ್ಷಣೆಗಾಗಿ ಹೊಸಮನೆ ಪಿಎಸೈ ಕೃಷ್ಣಕುಮಾರ್ ಪಿ ಮಾನೆ ಆರೋಪಿ ಕೊಕ್ಕೋ ಆಲಿಯಾಸ್ ಕುಮಾರನ ಬಲಗಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿ, ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು