ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ಹಿಂದಿನ ಪಿ ಡಿ ಓ, ಸೋಮಶೇಖರ್ ಹಾಗೂ ಶೇಖರ್ ನಾಯಕ್ ಇವರುಗಳು ಅವಧಿಯಲ್ಲಿ ಅನೇಕ ಅಕ್ರಮಗಳು ನಡೆದಿದ್ದು ಇವರುಗಳನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ದವತಿ ಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಇವರುಗಳ ಅವಧಿಯಲ್ಲಿ ನರೇಗಾ ಕಾಮಗಾರಿ ಗಳಲ್ಲಿ ಅಕ್ರಮ, ಸರ್ಕಾರಿ ಜಾಗವನ್ನು ಅಕ್ರಮವಾಗಿ ಖಾತೆ ಬದಲಾವಣೆ ಮಾಡಿರುವುದು, ಹೆಚ್ಚುವರಿ ಸಿಬ್ಬಂದಿಗಳ ಅಕ್ರಮ ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ತಾಲೂಕಿಗೆ ಅತಿ ದೊಡ್ಡ ಪಂಚಾಯಿತಿ ಯಲ್ಲಿ ಕಾರ್ಯದರ್ಶಿ ಇಲ್ಲದಿರುವುದು, ಗ್ರಾಮದಲ್ಲಿ ಬೀದಿ ದೀಪ ನಿರ್ವಹಣೆ ಇಲ್ಲದಿರುವುದು. ಗ್ರಾಮದ ಕೆರೆ ಹಾಗೂ ಕೆರೆ ಕೋಡಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಮನೆ ನಿರ್ಮಾಣ. ಅಕ್ರಮ ಲೇಔಟ್ ಗಳ ನಿರ್ಮಾಣ, ಖಾಸಗಿ ಲೇಔಟ್ ಗಳಿಗೆ ಅಕ್ರಮವಾಗಿ ಈ ಸ್ವತ್ತು ನೀಡಿರುವುದು. ನರೇಗಾ ಯೋಜನೆಯಲ್ಲಿ ಕಾರ್ಮಿಕರಿಗೆ ಕೆಲಸ ನೀಡದೆ ಇರುವುದು, ಸರ್ಕಾರಿ ಶಾಲೆ ಯಲ್ಲಿ ಅಡುಗೆ ಕೊಠಡಿ, ಸುಸಜ್ಜಿತ ಶೌಚಾಲಯ ಇಲ್ಲದೆ ಇರುವುದು, ಸಂತೆ ಮೈದಾನ ಹಾಗೂ ಮೈದಾನದಲ್ಲಿ ಶೌಚಾಲಯ ಸ್ವಚ್ಛತೆ ನಿರ್ವಹಣೆ ಇಲ್ಲದಿರುವುದು. ವಾರ್ಷಿಕ ಗ್ರಾಮ ಲೆಕ್ಕ ಪರಿಶೋಧನಾ ಸಭೆಯಲ್ಲಿ ಅಕ್ರಮ ಸಾಬೀತಾದರು ಕ್ರಮ ಕೈಗೊಳ್ಳದಿರು ವುದು. ಕಸ ವಿಲೇವಾರಿ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದೆ ಇರುವುದು. ಕಳೆದ ಆರು ತಿಂಗಳಿಂದ ಮಾಸಿಕ ಸಾಮಾನ್ಯ ಸಭೆ ನಡೆಸದೆ ಗ್ರಾಮಸ್ಥರಿಗೆ ವಿನಾಕಾರಣ ಈ ಸ್ವತ್ತು ನೀಡುವಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ರೈತರ ರಸ್ತೆಗಳನ್ನು ಅತಿಕ್ರಮಣ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳದೆರುವುದು.ನರೇಗಾ ಯೋಜನೆಯಲ್ಲಿ ಅಕ್ರಮ ಸಾಬೀತಾಗಿ ಜಿಲ್ಲಾ ಒಂಬಡ್ಸ್ ಮನ್ ರವರ ಆದೇಶದಂತೆ 2,80,477 ರೂ ಹಣವನ್ನು ರಿಕವರಿ ಮಾಡದೆ ಇರುವುದು. ಈ ಎಲ್ಲಾ ಅಕ್ರಮಗಳಿಗೆ ಕಾರಣರಾದ ಪಿ ಡಿ ಓ, ಸೋಮ ಶೇಖರ್ ಹಾಗೂ ಶೇಖರ್ ನಾಯಕ್ ರವರನ್ನು ಸೇವೆಯಿಂದ ವಜಾ ಮಾಡುವವರೆಗೂ ವೇದಿಕೆಯ ವತಿಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಪ್ರತಿಭಟನೆ ಮುಂದುವರೆ ಸುವುದಾಗಿ ಪ್ರತಿಭಟನಾಕರಾರು ಎಚ್ಚರಿಸಿದರು. ವೇದಿಕೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.