ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ನಗರ ಕಾಂಗ್ರೆಸ್ ಓಬಿಸಿ ಹಿಂದುಳಿದ ವರ್ಗ ಘಟಕದ ವತಿಯಿಂದ ಬುಧವಾರ ನಗರಸಭಾಧ್ಯಕ್ಷರ ಕಚೇರಿಯಲ್ಲಿ ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ನಗರಸಭಾಧ್ಯಕ್ಷೆ ಗೀತಾ ರಾಜಕುಮಾರ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಯೋಜನೆ ಅತ್ಯುತ್ತಮವಾಗಿದ್ದು, ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿ ನಡೆಯಲೆಂದು ಶುಭ ಕೋರಿದರು.
ಓಬಿಸಿ ಘಟಕದ ಅಧ್ಯಕ್ಷ ಬಿ.ಗಂಗಾಧರ್ ನೇತೃತ್ವವಹಿಸಿದ್ದರು. ನಗರಸಭೆ ಸದಸ್ಯರಾದ ಟಿಪ್ಪು ಸುಲ್ತಾನ್, ಚೆನ್ನಪ್ಪ, ಪಳನಿ ಮೋಹನ್ ಮುಖಂಡರಾದ ರಾಜಣ್ಣ, ಮಲ್ಲೇಶ್, ಜಗದೀಶ್ ಬೋಸ್ಲೆ, ಮಂಜುನಾಥ್, ಶಿವಮಾದು, ಮಂಜಣ್ಣ ಹರೀಶ ಸೇರಿದಂತೆ ಇನ್ನಿತರು ಇದ್ದರು.
Tags
ಭದ್ರಾವತಿ ವರದಿ