ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕಿನ ಹೊಳೆ ಹೊನ್ನೂರಿನಲ್ಲಿ ವ್ಯಕ್ತಿಯೋರ್ವನನ್ನ ಕತ್ತುಸೀಳಿ ಕೊಲೆಗೈಯ ಲಾಗಿದೆ. ವಾಕಿಂಗ್ ಗೆ ತೆರಳಿದ್ದ ಹೇಮಣ್ಣ(68) ನನ್ನ ಬರ್ಬರವಾಗಿ ಹತ್ಯೆ ಮಾಡ ಲಾಗಿದೆ. ಹೊಸ ಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆಯಲ್ಲಿ ಕೊಲೆ ಮಾಡಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳದಲ್ಲಿ ದೊಡ್ಡ ಸಂಖ್ಯೆಯ ಜನ ಜಮಾಯಿಸಿದ್ದರು.
ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಡಿಕೆ ಚೇಣಿ, ಭತ್ತ ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಹೇಮಣ್ಣರವರ ಮೇಲೆ ಎರಡು ವರ್ಷದ ಹಿಂದೆಯು ಇದೇ ರೀತಿ ಅಟ್ಯಾಕ್ ಆಗಿತ್ತು ಆಗ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು ಎನ್ನಲಾಗಿದೆ.