ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: 2025-26 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಗೆ ಅನುಗುಣ ವಾದ ಕೋರ್ಸ್‌ಗಳ ಪ್ರಥಮ ವರ್ಷದ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಮೆರಿಟ್ ಆಧಾರಿತ ಆನ್‌ಲೈನ್ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ಏ.11 ರಿಂದ ಆಹ್ವಾನಿಸ ಲಾಗಿದ್ದು, ಮೇ 15 ಸಂಜೆ 5.30 ಗಂಟೆಯವರೆಗೆ ಅವಕಾಶವಿರುತ್ತದೆ.
ಪ್ರವೇಶ ಬಯಸುವ ಅಭ್ಯರ್ಥಿಗಳು ತಮ್ಮ ಇಚ್ಚಾನುಸಾರ ಆದ್ಯತಾ ಪಟ್ಟಿ ಯಲ್ಲಿ ಕೋರ್ಸುಗಳ ಆಯ್ಕೆಗಳನ್ನು ನಮೂದಿಸಿ ಒಂದೇ ಅರ್ಜಿಯನ್ನು ಸಮೀಪದ ಯಾವುದೇ ಸರಕಾರಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಿಗೆ ಸಲ್ಲಿಸುವುದು.
ಅಭ್ಯರ್ಥಿಗಳು ನೀಡುವ ಆದ್ಯತೆ ಅನುಸಾರ ಮೆರಿಟ್ ಹಾಗೂ ರೋಸ್ಟರ್ ಅನುಗುಣವಾಗಿ ಆನ್‌ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು.
ಅರ್ಜಿ ಎಂಟ್ರಿಗಳನ್ನು ದಾಖ ಲಿಸಲು ಮೇ; 15 ಸಂಜೆ 5.30 ರವರೆಗೆ ಅವಕಾಶ ಇರುತ್ತದೆ.ಪಾಲಿಟೆಕ್ನಿಕ್ ಕಚೇರಿ ವೇಳೆಯಲ್ಲಿ ಹೆಚ್ಚಿನ ಮಾಹಿತಿಗೆ ಪಡೆಯಬಹುದು. ಕಾಲೇಜು ಹಾಗು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್‌ಗಳನ್ನು ಸಂಪರ್ಕಿಸ ಬಹುದು. ಮತ್ತಷ್ಟು ಮಾಹಿತಿಗೆ ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಪಾಲಿಟೆಕ್ನಿಕ್ ಪ್ರಾಂಶುಪಾಲರು: 8762717196/8861931539/7975041134 .ಸಂಪರ್ಕಿಸಲು ಕೋರಿದೆ.