ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕಿನ ಹೊಳೆಹೊನ್ನೂರು ಕೊಪ್ಪದಲ್ಲಿ ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.
ಹೊಳೆಹೊನ್ನೂರು ಕೊಪ್ಪದಲ್ಲಿ ಮೇ: 9 ರಂದು ಹೇಮಣ್ಣ ಎಂಬುವವರ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಮಂಜುನಾಥ್ ಯಾನೆ ಚಳಿ ಮಂಜ ಅವರನ್ನ ಬಂಧಿಸಲು ಹೋದಾಗ ಮಂಜುನಾಥ್ ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ಆತನ ಕಾಲಿಗೆ ಪಿಐ ಲಕ್ಷ್ಮೀಪತಿ ಗುಂಡು ಹಾರಿಸಿ ರಕ್ಷಿಸಿದ್ದಾರೆ.
ಪ್ರಕರಣ ಹೊಳಲೂರಿನ ಗುಡ್ಡದ ಬಳಿಯೊಂದರಲ್ಲಿ ಪ್ರಕರಣ ನಡೆದಿತ್ತು.
ಈ ಘಟನೆಯಲ್ಲಿ ಹೊಳೆಹೊನ್ನೂರು ಪಿಸಿ ಪ್ರಕಾಶ್ ಗೂ ಗಾಯಗಳಾಗಿದ್ದು ಮಂಜುನನ್ನ ಬಂಧಿಸಲು ಹೋದಾಗ ಮಂಜು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಆತನ ಕಾಲಿಗೆ ಗುಂಡೇಟು ತಗುಲಿದೆ.