ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಭದ್ರಾ ಜಲಾಶಯದ ನೀರಿನ ಮಟ್ಟ 146.3 ಅಡಿಗೆ ಏರಿಕೆಯಾಗಿದೆ. ಒಂದೇ ದಿನ ಒಂದು ಅಡಿ ಅಷ್ಟು ನೀರು ಹೆಚ್ಚು ಹರಿದು ಬಂದಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ.
ಇದರಿಂದಾಗಿ ಜಲಾಶಯಕ್ಕೆ ಬರುತ್ತಿ ರುವ ಒಳಹರಿವಿನ ಪ್ರಮಾಣವೂ ದುಪ್ಪಟ್ಟಾಗುತ್ತಿದೆ. ನಿನ್ನೆ 6999 ಕ್ಯೂಸೆಕ್ ಒಳಹರಿವಿದ್ದರೆ ಇಂದು 8493 ಕ್ಯೂಸೆಕ್ ಗೆ ಏರಿಕೆಯಾಗಿದೆ. ಭದ್ರಾ ಡ್ಯಾಂ ನೀರಿನ ಮಟ್ಟ 146.3 ಅಡಿ ಏರಿಕೆಯಾಗಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ: 146.3 ಅಡಿ ಒಳ ಹರಿವು: 8493 ಕ್ಯೂಸೆಕ್ ಹೊರ ಹರಿವು: 1272 ಕ್ಯೂಸೆಕ್ ಇತರೆ: 1200 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 118.11 ಅಡಿ ಕೆಪಾಸಿಟಿ: 14.319 ಟಿಎಂಸಿ ಜಲಾಶಯದ ಗರಿಷ್ಠ ಮಟ್ಟ: 186 ಅಡಿ.
ಕಳೆದ ಮೂರ್ನಾಲ್ಕು ದಿನಗಳಿಂದ ಮತ್ತೆ ಮಳೆ ಆರ್ಭಟ ಜೋರಾಗಿದೆ. ಜಲಾಶಯಕ್ಕೆ ಸುಮಾರು ಎಂಟೂವರೆ ಸಾವಿರದಷ್ಟು ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದಲೂ ನೀರು ಹೊರಗಡೆ ಬಿಡಲಾಗುತ್ತಿದೆ. ಹೊರ ಹರಿವು 1272 ಕ್ಯೂಸೆಕ್ ಇದ್ದರೆ, ಇತರೆ 1200 ಕ್ಯೂಸೆಕ್ ಬಳಕೆ ಮಾಡಿಕೊಳ್ಳ ಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 118.11 ಅಡಿ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದ ನೀರಿನ ಮಟ್ಟ 28 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ.
ಜಲಾಶಯ ಭರ್ತಿ ಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ. ಭರ್ತಿಯಾಗಲು ಇನ್ನು ಕೇವಲ 39.7 ಅಡಿ ನೀರು ಬೇಕಷ್ಟೇ.
ಕಳೆದ ವರ್ಷವರುಣ ಅಬ್ಬರಿಸಿ ಬೊಬ್ಬಿ ರಿದ ಕಾರಣ ಭದ್ರಾ ಜಲಾಶಯವು ಎರಡರಿಂದ ಮೂರು ಬಾರಿ ಭರ್ತಿ ಯಾಗಿತ್ತು. ಬೇಸಿಗೆ ಕಾಲ ಬಂದರೂ ಜಲಾಶಯದಲ್ಲಿ ನೀರು ಸಂಗ್ರಹ ವಾಗಿತ್ತು. ನಿಯಮಿತವಾಗಿ ಭದ್ರಾ ಎಡದಂಡೆ, ಬಲದಂಡೆ ನಾಲೆಗಳಲ್ಲಿ ನೀರು ಹರಿಸಿದ ಪರಿಣಾಮ ಜಲಾಶಯ ದ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಮತ್ತೆ ಮಳೆ ಶುರುವಾಗಿದ್ದು, ಒಳಹರಿವು ಹೆಚ್ಚಾಗುತ್ತಿದೆ.146.3 ಅಡಿ ನೀರು ಸಂಗ್ರಹವಾಗಿರುವುದು ಭದ್ರಾ ಜಲಾನ ಯನ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ರೈತರು ಹಾಗೂ ಜನರ ಖುಷಿಗೂ ಕಾರಣವಾಗಿದೆ. ಆದಾಗಲೇ ಜಲಾಶಯವು 144 ಅಡಿ ದಾಟುತ್ತಿರು ವುದು ಒಳ್ಳೆಯದು ಎನ್ನುತ್ತಾರೆ ರೈತರು.