ಭದ್ರಾವತಿ-ವೈಎಂಸಿಎ ಸಂಸ್ಥಾಪಕರ ದಿನಾಚರಣೆ: ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ನ್ಯೂಟೌನ್ ವೈಎಂಸಿಎ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ನ್ಯೂಟೌನ್ ವೇನ್ಸ್ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಕ್ರೈಸ್ತ ಅಭಿವೃದ್ಧಿ ಮಂಡಳಿ ನಿರ್ದೇಶಕ, ಬಿಗ್ ಜೆಟಿವಿ ಮಾಲೀಕ ಪ್ರಶಾಂತ್ ಜತನ್ನ ಉದ್ಘಾಟಿಸಿದರು.

 ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಅಶ್ರಿತ ರೆಬೆಲ್ಲೊ, ರೈಯಾನ್ ಮಥಾಯ್, ಎಸ್.ಜೆ ಶೈನಿ ಎಂಜೆಲ್, ಜೆ.ಎ ಎಸ್ತೆರ್‌ ಮತ್ತು ಎ.ಡಾಲ್ವಿನ್ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ದೀಕ್ಷಾ, ಜಾಸ್ವಾ, ಥಾಮಸ್, ಸಾಮ್ಯುಯೆಲ್, ಸಂಧ್ಯಾ, ತೆರೇಸಾ ಡೆಲ್ಲಿ, ಜೆಮಿಮಾ ಜಾಸ್ಪರ್, ಕೃಪ ಶರೋನ್ ಮತ್ತು ಸಹನಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 

ಸಂಘದ ಅಧ್ಯಕ್ಷ ಮೋಸಸ್ ರೋಸಯ್ಯ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ಐ.ವಿ ಸಂತೋಷ್, ಮಾಜಿ ಸದಸ್ಯ ಫ್ರಾನ್ಸಿಸ್, ಕೆಪಿಸಿಸಿ ಕಾರ್ಯದರ್ಶಿ, ವೈದ್ಯರ ಘಟಕದ ರಾಜ್ಯಾಧ್ಯಕ್ಷ ಡಾ:ಪ್ರದೀಪ್ ಡಿ ಮೆಲ್ಲೋ, ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್, ಟಿಸಿಡಬ್ಲ್ಯುಎ ಭಾಸ್ಕರ್ ಬಾಬು, ಸೆಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಸಂಸ್ಥಾಪಕಿ ಲತಾ ರಾಬರ್ಟ್ ಡಿ'ಸೋಜಾ, ಯುವ ಮುಖಂಡ ಬಿ.ಎಸ್ ಗಣೇಶ್, ವೈಎಂಸಿಎ ಉಡುಪಿ ಯೋಜನಾ ವಿಭಾಗದ ಕಾರ್ಯದರ್ಶಿ ರೆ: ಧನರಾಜ್, ವೆಸ್ಲಿ ಕಾರ್ಕಡ, ಮುಖಂಡರಾದ ದಾಸ್, ಎಂ.ಜಿ. ರಾಮಚಂದ್ರನ್ ಮತ್ತು ಅಭಿ ಮತ್ತು ವೈಎಂಸಿಎ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು