ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: 500 ರೂ ಗಳ ನಕಲಿ ನೋಟು ನೀಡಿ ವ್ಯವಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಂಡಾರ ಹಳ್ಳಿಯ ವಾಸಿ ರಿಯಲ್ ಎಸ್ಟೇಟ್ ಉದ್ಯಮಿ ರಂಗೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ.
ಕೂಲಿಬ್ಲಾಕ್ ಶೆಡ್ ವಾಸಿ ಅಜಯ್ (25) ಠಾಣೆಗೆ ನೀಡಿದ ದೂರಿನನ್ವಯ ತನಿಖಾ ತಂಡವು ಪ್ರಕರಣದ ಆರೋಪಿ ರಂಗೇಗೌಡ (57) ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ನಕಲಿ ನೋತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಆರೋಪಿತನಿಂದ 500 ರೂ ಮುಖ ಬೆಲೆಯ 13 ನೋಟು ಗಳು, 200 ರೂ ಮುಖ ಬೆಲೆಯ 1 ನೋಟು, 100 ರೂ ಮುಖ ಬೆಲೆಯ 1 ನೋಟು, 50 ರೂ ಮುಖ ಬೆಲೆಯ 1 ನೋಟು ಹಾಗೂ ಕೃತ್ಯಕ್ಕೆ ಬಳಸಿದ ಡಿಸ್ಕವರ್ ಬೈಕ್ ನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಜೂ :12 ರಂದು ಸಂಜೆ ಸಮಯದಲ್ಲಿ ಒಬ್ಬ ಅಸಾಮಿಯು ಡಿಸ್ಕವರ್ ಬೈಕಿನಲ್ಲಿ ಬಂದು 500 ರೂ ನಕಲಿ ನೋಟು ಕೊಟ್ಟು ವ್ಯಾಪಾರ ಮಾಡಿ ಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ.ಕೆ.ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಎ ಜಿ ಕಾರಿಯಪ್ಪ ರವರ ಮಾರ್ಗದರ್ಶನದಲ್ಲಿ, ಭದ್ರಾವತಿ ಡಿ.ವೈ.ಎಸ್.ಪಿ ಕೆ ಆರ್.ನಾಗರಾಜ, ನಗರ ವೃತ್ತ ಸಿ.ಪಿ.ಐ ಮಂಜುನಾಥ್ ರವರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪಿ.ಎಸ್.ಐ ಟಿ, ರಮೇಶ್, ರವರ ನೇತೃತ್ವದ ಸಿಬ್ಬಂದಿಗಳಾದ ಎ.ಎಸ್.ಐ ಶಿವಸ್ವಾಮಿ , ಹೆಚ್.ಸಿ.ನವೀನ್, ವಿಜಯ್ ಹೆಚ್.ವೈ ಸಿ.ಹೆಚ್.ಸಿ, ಶ್ರೀಧರ್ ಸಿ.ಹೆಚ್.ಸಿ, ಮಾರುತಿ ಪಾಟೀಲ ಸಿಪಿಸಿ, ಪ್ರಸನ್ನ ಸಿಪಿಸಿ, ರಘು ಬಿ.ಎಂ ಸಿಪಿಸಿ, ನಾಗರಾಜಪ್ಪ ಬಿ.ಹೆಚ್ ಸಿಪಿಸಿ ರವರನ್ನು ಒಳಗೊಂಡ ತನಿಖಾ ತಂಡ ವನ್ನು ರಚಸಿಲಾಗಿತ್ತು.
ಆರೋಪಿ ಬೇರೆ ಕಡೆ ವ್ಯವಹಾರ ಮಾಡಿದ್ದರ ಬಗ್ಗೆ ತಿಳಿಸಿದ್ದು OFP 790829 ಮತ್ತು 9TV 978202 ಈ ನಂಬರಿನ 500 ರೂ ಮುಖ ಬೆಲೆಯ ನೋಟುಗಳು ಕಂಡು ಬಂದಲ್ಲಿ ಸಾರ್ವಜನಿಕರು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಗೆ ಅಥವಾ ಶಿವಮೊಗ್ಗ, ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ.
ತನಿಖಾ ತಂಡದ ಉತ್ತಮ ವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕ ರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.