ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ತಾಲ್ಲೂಕು ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜು ಅಧ್ಯಕ್ಷತೆ ಯಲ್ಲಿ ಪ್ರತಿ ತಿಂಗಳು ನಡೆಯವ ಎರಡನೇ ಶನಿವಾರ ಮಾಸಿಕ ಸಭೆಯು ನಡೆಯಿತು.
ಬಳಿಕ ಮಾತನಾಡಿ, ಛಲವಾದಿ ಮಹಾಸಭಾ ರಾಜ್ಯ ಘಟಕದ ಆಡಳಿತ ಮಂಡಳಿಯ ಚುನಾವಣೆಯು ಕೆಲವು ತಿಂಗಳಲ್ಲಿ ನಡೆಯಲಿದೆ. ಚುನಾವಣೆ ಯಲ್ಲಿ ಸ್ಪರ್ಧಿಸಲು ಆಸಕ್ತಿ ಉಳ್ಳವರು ಅಥವಾ ಮತ ಚಲಾಯಿಸ ಬೇಕಾದರೆ ಕಡ್ಡಾಯವಾಗಿ ರಾಜ್ಯ ಸಮಿತಿಯ ಸದಸ್ಯರಾಗಿಬೇಕು.ಆದ್ದರಿಂದ ಇನ್ನೂ ಸಮಯವಿರುವುದರಿಂದ ತಾಲ್ಲೂಕಿನ ಛಲವಾದಿ ಬಂಧುಗಳು ಮಹಾಸಭಾದ ರಾಜ್ಯ ಘಟಕದ ಸದಸ್ಯರಾಗಲು ನಮ್ಮನ್ನು ಭೇಟಿ ಮಾಡಿ ಸದಸ್ಯರಾಗು ವಂತೆ ಮನವಿ ಮಾಡಿದರು.
ಮಹಾಸಭಾದ ಸದಸ್ಯರು ಯಾರೇ ಆಗಲಿ ಯಾವುದೇ ಗ್ರಾಮವಾಗಲಿ ಬಂಧುಗಳಿಗೆ ಅನ್ಯಾಯ ಅಥವಾ ತೊಂದರೆ ಸಿಲುಕಿದರೆ ಅವರ ಪರವಾಗಿ ರಾಜ್ಯ ಹಾಗೂ ತಾಲ್ಲೂಕು ಘಟಕ ನಿಲ್ಲುತ್ತದೆ.ಛಲವಾದಿ ಬಂಧುಗಳು ಸ್ವಾಭಿಮಾನ ಬಿಟ್ಟು ಕೊಡಬಾರದು. ಛಲವಾದಿ ಬಂಧುಗಳು ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು.ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ನೆರವಾಗಬೇಕೆಂದು ಪೋಷಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಹಾಸಭಾದ ಗೌರವ ಸಲಹೆಗಾರರಾದ ಸಿಂಧಘಟ್ಟ ಸೋಮ ಸುಂದರ್, ಪುರಸಭಾ ಸದಸ್ಯ ಗಿರೀಶ್,ಬಿಎಸ್ಪಿ ಗಂಗಾಧರ್,ಛಲವಾದಿ ಮಹಾಸಭಾದ ಕಾರ್ಯದರ್ಶಿ ಹರಿಹರ ಪುರ ನರಸಿಂಹ ಶಿಕ್ಷಕ ಸದಾನಂದ, ತೆಂಡೇಕೆರೆ ಶಿವಕುಮಾರ್, ಬೂಕನಕೆರೆ ತಮ್ಮಯ್ಯ,ನಾಟನಹಳ್ಳಿ ಮಂಜುನಾಥ್, ನಿವೃತ್ತ ಶಿಕ್ಷಕ ಕುಂದೂರಯ್ಯ, ಜಯ ಕುಮಾರ್,ಪುಟ್ಟರಾಜು, ಬಸವರಾಜು ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ