ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಲೋಕಾಯುಕ್ತ ವತಿಯಿಂದ
ಜೂ. 17 ರಂದು ನಗರದ ತಾ ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ1.15 ಗಂಟೆ ಯವರೆಗೆ, ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸಲಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಸರ್ಕಾರಿ ಕಚೇರಿಗಳಲ್ಲಿ ದುರಾಡಳಿತ, ಕೆಲಸ ಕಾರ್ಯಗಳನ್ನು ಮಾಡಿ ಕೊಡುವಲ್ಲಿ ವಿಳಂಬ ನೀತಿ, ಲಂಚ ಕೇಳುತ್ತಿದ್ದರೆ, ಸರ್ಕಾರದ ಹಣ ದುರುಪಯೋಗ, ಕಳಪೆ ಕಾಮಗಾರಿ ಕಂಡು ಬಂದರೆ, ಸರ್ಕಾರಿ ನೌಕರ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದರೆ, ಸರ್ಕಾರಿ ನೌಕರ ಅಧಿಕಾರ ದುರುಪ ಯೋಗ ಪಡಿಸಿಕೊಂಡಿ ರುವ ಬಗ್ಗೆ ದೂರಗಳಿದ್ದಲ್ಲಿ ಸಾರ್ವಜನಿಕರು ಸಭೆಗೆ ಹಾಜರಾಗಿ ಲಿಖಿತ ಅಹವಾಲು ಸಲ್ಲಿಸು ವಂತೆ ಲೋಕಾಯುಕ್ತ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.