ಭದ್ರಾವತಿ-ಹಸಿದವನಿಗೆ ಅನ್ನ ಹಾಕುವುದು ಭಗವಂತನನ್ನು ತೃಪ್ತಿಪಡಿಸಿದಂತೆ:ಜೆ.ಎನ್. ಬಸವರಾಜಪ್ಪ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ದೇವರು ಈ ಭೂಮಿಯ ಮೇಲೆ ವಾಸಿಸುವ ಎಲ್ಲರಿಗೂ ಆಹಾರದ ಮಾರ್ಗ ತೋರಿಸುತ್ತಾನೆ ಎನ್ನುವುದಕ್ಕೆ ತಮಿಳ್ ಯೂತ್ಸ್ ಅಸೋಸಿಯೇಷನ್ ಸಾಕ್ಷಿಯಾಗಿದೆ ಎಂದು ನಗರದ ಹಿರಿಯ ಸಾಹಿತಿ ಜೆ.ಎನ್. ಬಸವರಾಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. 

ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಪೆಟ್ರೋಲ್ ಬ್ಯಾಂಕ್ ಮುಂಭಾಗ ಹಮ್ಮಿ ಕೊಳ್ಳಲಾಗಿದ್ದ ಬಡವರಿಗೆ ಅಂಗವಿಕಲರಿಗೆ ಭಿಕ್ಷುಕರಿಗೆ ಅನಾಥರಿಗೆ ಉಚಿತ ಬೆಳಗಿನ ಉಪಹಾರದ ವ್ಯವಸ್ಥೆ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಕಾಲು, ಕೈ, ಕಣ್ಣಿಲ್ಲದಿದ್ದರು ಅವರಿಗೂ ಹೊಟ್ಟೆಯನ್ನು ಕೊಟ್ಟಿರುತ್ತಾನೆ. ಶ್ರೀಮಂತನಿಗೂ, ಬಡವನಿಗೂ ಹಸಿವಾಗುತ್ತದೆ. ಎಲ್ಲರಿಗೂ ಹಸಿವಿನ ಬೆಲೆ ಅನ್ನದ ಬೆಲೆ, ತಿಳಿಸಬೇಕೆಂಬುದು ಭಗವಂತನ ನಿಶ್ಚಯ ವಾಗಿರುತ್ತದೆ. ಕೈ ಕಾಲು ಗಟ್ಟಿ ಇರುವವರು ದುಡಿದು ತಿನ್ನುತ್ತಾರೆ. ಆದರೆ ಅನಾಥರಿಗೆ, ಅಂಗವಿಕಲರಿಗೆ, ಭಿಕ್ಷುಕರಿಗೆ ಒಪ್ಪತ್ತಿನ ಊಟ ಹಾಕುವವರು ಯಾರು ? 

ಈ ನಿಟ್ಟಿನಲ್ಲಿ ಯೋಚಿಸಿದ, ತಮಿಳ್ ಯೂತ್ಸ್ ಅಸೋಸಿಯೇಷನ್ ಸಂಘದವರು, ಪ್ರತಿದಿನ ಅನಾಥರಿಗೆ ಬೆಳಗಿನ ಉಪಹಾರ ಕೊಡುವ ವ್ಯವಸ್ಥೆ ಯನ್ನು ನಿರಂತರವಾಗಿ ಮಾಡುತ್ತಾ ಬಂದಿರುತ್ತಾರೆ. ಈ ಉದ್ದೇಶದಿಂದ ಸಂಘದ ವರಿಗೆ ದಾನಿಗಳ ಸಹಕಾರ ಬೇಕಾಗಿದೆ. ಹಸಿದವನಿಗೆ ಅನ್ನ ಹಾಕುವುದು ಭಗವಂತನನ್ನು ತೃಪ್ತಿಪಡಿಸಿದಂತೆ ಹಾಗೂ ಭಗವಂತ ನನ್ನು ಪೂಜಿಸಿದಂತೆ ಎಂದರು.

ಸಮಾಜದಲ್ಲಿ ಮಾದರಿ ಕಾರ್ಯ ಮಾಡುತ್ತಿರುವ ತಮಿಳ್ ಯೂಥ್ಸ್ ಅಸೋ ಸಿಯೇಷನ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. 

. ಕಾರ್ಯಕ್ರಮಕ್ಕೆ 300 ದಿನಗಳು ತುಂಬಿದ್ದ ಸಂದರ್ಭದಲ್ಲಿ, ಹಿರಿಯ ಸಾಹಿತಿ ಜೆ.ಎನ್. ಬಸವರಾಜಪ್ಪ ಇವರನ್ನು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಪ್ರತಾಪ್, ಸಮೀದ್, ನವೀನ್ ಇವರನ್ನು ಸನ್ಮಾನಿಸ ಲಾಯಿತು. ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೂರಕ್ಕೂ ಹೆಚ್ಚು ಅನಾಥರು ಉಪಹಾರವನ್ನು ಸೇವಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು