ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸಿಂಗನಮನೆ ಗ್ರಾ ಪಂ ಯಲ್ಲಿ ನಡೆದಿರುವ ಹಲವು ಅಕ್ರಮ ಗಳನ್ನು ವಿರೋಧಿಸಿ, ಮೇ: 20 ರಿಂದ ಕರವೇ (ಶಿವರಾಮೇಗೌಡ ಬಣ)ದ ವತಿಯಿಂದ ಅನಿರ್ದಿಷ್ಟಾವದಿ ಉಪವಾಸ ಸತ್ಯಾಗ್ರಹ ಪ್ರತಿಭಟನೆ ಯನ್ನು ಅಧಿಕಾರಿಗಳ ಭರವಸೆ ಯಿಂದ ಕೈ ಬಿಡಲಾಗಿದೆ.
ಗ್ರಾಮ ಪಂಚಾಯಿತಿಯಲ್ಲಿ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಪಿ ಡಿ ಓ ಸೋಮಶೇಖರ್ ಹಾಗೂ ಶೇಖರ್ ನಾಯಕ್ ರವರು ಮಾಡಿರುವ ಅಕ್ರಮಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು.
ಹಿಂದಿನ ಇಬ್ಬರು ಪಿಡಿಓಗಳು ಅಕ್ರಮ ವಾಗಿ ಎರೆಡೇರೆಡು ಮಾಸಿಕ ಸಾಮಾನ್ಯ ಸಬಾ ನಡವಳಿ 2018 ದಾಖಲೆಗಳನ್ನು 2017 ಎಂದು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ 2017 ಹಾಗೂ 2018 ಎಂದು ಸುಳ್ಳು ದಾಖಲೆ ಸೃಷ್ಟಿಸಿ ಕೆಲಸ ಮಾಡುತ್ತಿದ್ದ ಹೆಚ್ಚುವರಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಾದ ಸೋಮಶೇಖರ್ ಮತ್ತು ಶೇಖರ್ ನಾಯಕ್ ರವರನ್ನು ಸೇವೆಯಿಂದ ವಜಾಮಾಡುವಂತೆ ಪ್ರತಿಭಟನಾ ಕಾರರು ಒತ್ತಾಯಿಸಿದ್ದರು.
ಅದರಂತೆ ಹೆಚ್ಚುವರಿ ಸಿಬಂದಿಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ಸರ್ಕಾರಿ ನಿವೇಶನ ಮಾರಾಟದ ಬಗ್ಗೆ ತನಿಖೆ ನಡೆಸುವುದಾಗಿ ಹಾಗೂ ಖಾಸಗಿ ಲೇಔಟ್ ಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಪಂಚಾಯಿತಿ ಕಛೇರಿಗೆ ಬಿಡಬೇಕಾದ ಖಾಲಿ ನಿವೇಶನವನ್ನು ಬಿಡದೆ ಇರುವ ಬಗ್ಗೆ ಹಾಗೂ ಸರ್ಕಾರಿ ಗ್ರಾಮಠಾಣ ಒತ್ತುವರಿಮಾಡಿ ಲೇಔಟ್ ಮಾಡಿರುವುದಕ್ಕೆ ತಹಶೀಲ್ದಾರ್ ಹಾಗೂ ಎಡಿಎಲ್ ಆರ್ ರವರಿಂದ ಅಳತೆ ನಡೆಸಿ ಜಾಗವನ್ನು ವಾಪಾಸ್ ಪಡೆಯ ಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ವೆ ಕಾರ್ಯ ಮಾಡುವವರೆಗೂ ಪ್ರತಿಭಟನಾಕರರ ಮನಹೋಲಿಸಿ ಅಧಿಕಾರಿಗಳು ತಿಂಗಳ ಸಮಯವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.