ಸಾಹಿತ್ಯ ಮತ್ತು ವೈದ್ಯಕೀಯ ವೃತ್ತಿ ಉತ್ತಮ ಸಾಹಿತಿಗಳ ಲಕ್ಷಣ:ಎಂ.ಎನ್. ಸುಂದರ ರಾಜ್

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಕನ್ನಡ ಸಾಹಿತ್ಯ ಬೆಳವಣಿ ಗೆಗೆ ವೈದ್ಯರ ಕೊಡುಗೆ ಅತ್ಯಮೂಲ್ಯ ತಮ್ಮ ಕೆಲಸದ ಒತ್ತಡದಲ್ಲಿಯೂ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರು ವುದು ವೈದ್ಯಕೀಯ ಸಾಹಿತ್ಯದ ಲಕ್ಷಣ ವಾಗಿದೆ. ವೈದ್ಯಕೀಯ ಸಾಹಿತ್ಯ ಇನ್ನೂ ಉತ್ತಮವಾಗಬೇಕಾದರೆ ಆಕರ್ಷಕ ವಸ್ತು ವೈವಿಧ್ಯ ವಿಜ್ಞಾನದ ಮಾಹಿತಿ ಮತ್ತು ಚಿಕಿತ್ಸಾ ಅನುಭವ ಈ ಮೂರನ್ನು ಬೆರೆಸಿ ಸಾಹಿತ್ಯದ ಅಂಚನ್ನು ಕಟ್ಟಬೇಕು ಎಂದು ಬರಹಗಾರ ಸಾಹಿತಿ ಎಂ ಎನ್ ಸುಂದರ ರಾಜ್ ತಿಳಿಸಿದ್ದಾರೆ.

 ಅವರು ಭಾರತೀಯ ವೈದ್ಯ ಸಂಘದ ಜಿಲ್ಲಾ ಘಟಕದ ವತಿಯಿಂದ ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

 ಕರ್ನಾಟಕದಲ್ಲಿ 350ಕ್ಕೂ ಹೆಚ್ಚು ವೈದ್ಯ ಸಾಹಿತಿಗಳಿದ್ದು ಶಿವಮೊಗ್ಗದ ಪಾಲು ಅಧಿಕ ವಾಗಿದೆ. ವೈದ್ಯಕೀಯ ಸಾಹಿತ್ಯಕ್ಕೆ ನೊಬೆಲ್ ಬಹುಮಾನ ಗಳಿಸಿಕೊಟ್ಟ ರಷ್ಯಾದ ಆoಟೋನ್ ಚೆಕ್ ಹಾವ್ ತುಂದು ಕೊಟ್ಟಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಜುರಾಸಿಕ್ ಪಾರ್ಕ್ ಲೇಖಕ ಮೈಕೆಲ್ ಕ್ರಿಸ್ಟಿನ್ ಶರ್ಲಾಕೋ ಹೊಮ್ಸ್ ಪಾತ್ರ ಸೃಷ್ಟಿಸಿದ ಸರ್ ಅರ್ಥ ಕಾನನ್ ಡಯಲ್ ಸಹ ವೈದ್ಯರಾಗಿದ್ದರು. ಅದೇ ರೀತಿ ನಮ್ಮ ನಾಡಿನಲ್ಲಿ ಹಲವಾರು ಹಿರಿ ಕಿರಿ ವೈದ್ಯ ಸಾಹಿತಿಗಳು ತಮ್ಮ ಕಾಣಿಕೆ ಯನ್ನು ವೈದ್ಯ ಸಾಹಿತ್ಯಕ್ಕೆ ನೀಡಿ ಅದನ್ನು ಶ್ರೀಮಂತ ಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಮೊಗ್ಗ ಐಎಂಎ ಲಿಟರರಿ ಕ್ಲಬ್ ಅನ್ನು ಪ್ರಾರಂಭಿಸಿರು ವುದು ತುಂಬಾ ಅಪೇಕ್ಷಣೀಯ. ಇದರ ಜೊತೆಗೆ ವೈದ್ಯಕೀಯ ಸಾಹಿತ್ಯದ ಕೃತಿಗಳನ್ನು ಒಳಗೊಂಡ ಒಂದು ಪುಸ್ತಕ ಭಂಡಾರವನ್ನು ಹೊಂದುವ ಬಗ್ಗೆ ಆಲೋಚಿಸಬೇಕು ಎಂದು ಸಲಹೆ ನೀಡಿದರು.

 ಇದೆ ಸಂದರ್ಭದಲ್ಲಿ ಐಎಮ್ಎ ವತಿ ಯಿಂದ ಪ್ರಕಟಿಸುತ್ತಿರುವ ತ್ರೈಮಾಸಿಕ ಪತ್ರಿಕೆಯನ್ನು ಸಹ ಬಿಡುಗಡೆ ಮಾಡಲಾಯಿತು.ಲಿಟರರಿ ಕ್ಲಬ್ ಪ್ರಾರಂಭದ ಈ ಸಂದರ್ಭದಲ್ಲಿ ವಿವಿಧ ಲೇಖಕರ ಆರು ಕೃತಿಗಳ ಪರಿಚಯ ವನ್ನು ಮಾಡಿಕೊಡಲಾಯಿತು. 

ಈ ಕಾರ್ಯಕ್ರಮವನ್ನು ವೈದ್ಯರುಗಳಾದ ಕೃಷ್ಣ ಭಟ್, ರತ್ನಾಕರ್, ಅನುಪಮಾ ಬಸವರಾಜ್ ಪ್ರಶಾಂತ್ ಮತ್ತು ನಿವೇದಿತ ನಡೆಸಿಕೊಟ್ಟರು.

 ಡಾ.ಕೆ.ಆರ್. ಶ್ರೀಧರ್ ಸಮಾರಂಭದ ಅಧ್ಯಕ್ಷತೆ ವಹಿಸಿದರು.ವೇದಿಕೆಯಲ್ಲಿ ಡಾ.ರಾಜ ಡಾ: ರಾಜಾರಾಮ್ ಡಾ. ವಿನಯ ಶ್ರೀನಿವಾಸ್ ಮತ್ತು ಐಎಂಎ ಅಧ್ಯಕ್ಷ ಡಾ.ಶ್ರೀಧರ್ ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು