ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಜಮೀನು ವಿವಾದ ಸಂಬಂಧ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆನಡೆಸಿ ಆತನ ಸಾವಿಗೆ ಕಾರಣರಾಗಿದ್ದ ಏಳು ಆರೋಪಿಗಳಿಗೆ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲ ಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚಿಟ್ಟಿಯರ್ ಮಂಗಳ ವಾರ ಜೀವಾವಧಿ ಶಿಕ್ಷಿವೀಧಿಸಿ ತೀರ್ಪು ನೀಡಿದರು.
ದಿ.5-3-20 ರಂದು ಕರಿಯಪ್ಪನ ಮಗ ನಾಗರಾಜ ಹಾಗೂ ಅವರ ಜೊತೆ ಅರುಣ ಎಂಬುವರು ಜಮೀನಿನ ಬತ್ತದಗದ್ದೆಗೆ ನೀರುಕಟ್ಟಲು ವಿಚಾರ ದಲ್ಲಿ ಆರೋಪಿ ಬಡ್ಡಿ ಪರಮೇಶಿ, ಜಗದೀಶ,ರಮೇಶ,ಗೌತಮ, ಅಭಿಷೇಕ್, ವಿಕ್ರಂ,ಸoಜಯ್ ಎoಬುವವರು ಕಬ್ಬಿಣದ ಪೈಪು ಮತ್ತಿತರ ಮಾರಾಕಾಸ್ತ್ರಗಳಿಂದ ನಾಗರಾಜ ಅರುಣನ ಮೇಲೆ ಹಲ್ಲೆನಡೆಸಿದ್ದಾರೆ,
ತಾಲೂಕಿನ ಹೊಳೆಹೊನ್ನೂರು ಪೋಲಿಸ್ ಠಾಣಾವ್ಯಾಪ್ತಿಯಲ್ಲಿರುವ ಭದ್ರಾಪುರದ ನಿವಾಸಿ ಕರಿಯಪ್ಪ ಎಂಬಾತನಿಗೆ ಕೂಡ್ಲಿಯ ಸರ್ವೆನಂಬರ್ 196 ನಲ್ಲಿರುವ 41/2 ಎಕರೆ ಜಮೀನಿದ್ದು, ಜಮೀನಿನ ಸಂಬoಧ ಕರಿಯಪ್ಪನಿಗೂ ಹಾಗೂ ಆರೋಪಿಗಳ ನಡುವೆ ವಿವಾದ,ಮನಸ್ಥಾಪವಿತ್ತು.
ದಿ.5-3-2020 ರಂದು ರಾತ್ರಿ 9-30 ವೇಳೆಗೆ ಕರಿಯಪ್ಪನ ಮಗ ನಾಗರಾಜ ಹಾಗೂ ಅವರನ ಜೊತೆ ಅರುಣ ಎಂಬುವರು ಜಮೀನಿನ ಬತ್ತದಗದ್ದೆಗೆ ನೀರುಕಟ್ಟಲು ಹೋದಾಗ ಅಲ್ಲಿಗೆ ಎರಡು ಬೈಕ್ ಗಳಲ್ಲಿ ಬಂದ ಆರೋಪಿ ಬಡ್ಡಿಪರಮೇಶಿ , ಜಗದೀಶ, ರಮೇಶ,ಗೌತಮ,ಅಭಿಷೇಕ್,ವಿಕ್ರಂ,
ಸoಜಯ್ ಎoಬುವವರು ಕಬ್ಬಣದ ಪೈಪು ಮತ್ತಿತರ ಮಾರಾಕಾಸ್ತ್ರಗಳಿಂದ ನಾಗರಾಜ ಅರುಣನ ಮೇಲೆ ಹಲ್ಲೆನಡೆಸಿದ್ದಾರೆ,
ಘಟನಾಸ್ಥಳಕ್ಕೆ ಹೋಗಿ ಆರೋಪಿ ಗಳನ್ನು ತಡೆಯಲು ಯತ್ನಿಸಿದ ಕರಿಯಪ್ಪನ ಮೇಲೆ ಹಾಗೂ ಉಳಿದ ವರ ಮೇಲೆ ಆರೋಪಿಗಳು ಮಾರಾ ಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.
ಹಲ್ಲೆಯಿಂದಾಗಿ ಗಂಭೀರವಾಗಿ ಗಾಯ ಗೊಂಡಿದ್ದ ಕರಿಯಪ್ಪನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಕರಿಯಪ್ಪ ಮೃತಪಟ್ಟಿದ್ದ.
ಹೊಳೆಹೊನ್ನೂರು ಪೋಲಿಸ್‌ಠಾಣೆ ಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೋಲಿಸರು, ಆರೋಪಿಗಳ ವಿರುದ್ಧ ಬಾರತೀಯ ಸಂಡಸoಹಿತೆ ಕಲಂ. 302,307,324,323,341, 504,142, 147, 506 ಅಡಿಯಲ್ಲಿ ಶಿಕ್ಷಾರ್ಹ ಅಪರಾದವೆಸಗಿ ದ್ದಾರೆ ಎಂದು ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಕುರಿತಂತೆ ಸಾಕ್ಷೀದಾರರ ಸಾಕ್ಷ್ಯ ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರನ್ಯಾಯಾಲಯ ಸರ್ಕಾರಿ ಅಭಿಯೋಜಕರ ಹಾಗೂ ಆರೋಪಿಗಳ ಪರವಕೀಲರವಾದ, ಪ್ರತಿವಾದಗಳನ್ನು ಆಲಿಸಿದ ನಂತರ ಆರೋಪಿಗಳ ಪೈಕಿ ನಾಲ್ಕನೇ ಆರೋಪಿ ಮಂಜಪ್ಪ ಮತ್ತು ಏಳನೆ ಆರೋಪಿ ಶರತ್ ಎಂಬುವವರ ಮೇಲಿನ ಆರೋಪ ಸಭೀತಾಗದ ಕಾರಣ ಅವರಿಬ್ಬರ ಬಿಡುಗಡೆಗೆ ಆದೇಶಿಸಿ, ಉಳಿದ ಆರೋಪಿ ಗಳಾದ ಬಡ್ಡಿಪರಮೇಶಿ ,ಜಗದೀಶ, ರಮೇಶ, ಗೌತಮ,ಅಭಿಷೇಕ್, ವಿಕ್ರಂ, ಸoಜಯ್ ಅವರುಗಳ ಮೇಲಿನ ಆರೋಪ ಸಾಬೀತಾದ ಕಾರಣ ಈ ಏಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆವಿಧಿಸಿದೆ.
ದಂಡ ಪಾವತಿಸಲು ಆದೇಶ:
ಆರೋಪಿಗಳಿಂದ ಹತ್ಯೆಗೊಳಗದ ಕರಿಯಪ್ಪನ ಪತ್ನಿ ಗಂಗಮ್ಮನಿಗೆ ಮೂರು ಲಕ್ಷ ಪರಿಹಾರ ಹಾಗು ಆರೋಪಿಗಳಿಂದ ಹಲ್ಲೆಗೊಳಗಾಗಿ ರುವ ನಾಗರಾಜ, ಅರುಣ,ವೀರಪ್ಪ, ಮನೋಹರ, ನಾಗರಾಜ ಈ ಐವರಿಗೆ ತಲಾ ಒಂದೊoದು ಲಕ್ಷ ಪರಿಹಾರವನ್ನು ಆರೋಪಿ ಗಳು ನೀಡಬೇಕೆಂದು ನಾಲ್ಕನೇ ಹೆಚ್ಚುವರಿ ಜಿಲ್ಲಾಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚಿಟ್ಟಿಯರ್ ತೀರ್ಪುನೀಡಿ ಆದೇಶಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾದ ಪಿ.ರತ್ಮಮ್ಮ ವಾದಿಸಿದ್ದರು.