ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಹೆಮ್ಮನಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ ಗೆಳಯರ ಬಳಗದಿಂದ ಅದ್ದೂರಿ ಯಾಗಿ ನಾಡಪ್ರಭು ಶ್ರೀ ಕೆಂಪೇಗೌಡರ 516ನೇ ಜಯಂತೋ ತ್ಸವ ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶ್ರೀ ಕೆಂಪೇಗೌಡ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಗ್ರಾ. ಪಂ ಮಾಜಿ ಅಧ್ಯಕ್ಷ ಸತೀಶ್ ಕೆಂಪೇಗೌಡರು ಕಟ್ಟಿದಂತಹ ರಾಜ್ಯದ ರಾಜಧಾನಿ ಬೆಂಗಳೂರು ಇಂದಿಗೂ ಸರ್ವ ಜನಾಂಗದ ಜನರಿಗೆ ಜೀವನಕ್ಕೆ ನೆರಳು ನೀಡಿದೆ. ಇಲ್ಲಿ ರಾಜ್ಯದವರೇ ಅಲ್ಲದೆ ನೆರೆ ರಾಜ್ಯದ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಮಹಾನಗರಕ್ಕೆ ಅಡಿಪಾಯ ಹಾಕಿದ ಕೆಂಪೇಗೌಡರ ದೂರದೃಷ್ಟಿ ಸ್ಮರಣೀಯವಾದದ್ದು ಎಂದು ಇಂದು ಕೆಂಪೇಗೌಡರ ಜಯಂತಿಯನ್ನು ಹಿನ್ನಲೆ ನಮ್ಮ ಗ್ರಾಮದ ಹಿರಿಯರು ಹಾಗೂ ಶ್ರೀ ಕೆಂಪೇಗೌಡರ ಗೆಳಯರ ಬಳಗದಿಂದ ಅರ್ಥಪೂರ್ಣವಾಗಿದೆ ಆಚರಣೆ ಮಾಡ ಲಾಗಿದೆ ಮಹನೀಯರ ಆಚರಣೆಗೆ ಸೀಮಿತವಾಗದೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸದೃಢ ಸಮಾಜಕ್ಕೆ ಚಿಂತಿಸೋಣ ಎಂದರು.
ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೃಷ್ಣೇಗೌಡ ಮಾತನಾಡಿ ದೂರ ದೃಷ್ಟಿ ಆಡಳಿತದ ಗುರಿ ಇಟ್ಟು ಕೊಂಡು ಭೌಗೋಳಿಕ ವಾಗಿ ಉತ್ತಮ ಹವಾಮಾನ ಹೊಂದಿದಂತಹ ಬೆಂಗಳೂರನ್ನು ಗುರುತಿಸಿದ ಕೆಂಪೇಗೌಡರು ಮಹಾನಗರದ ಸೃಷ್ಟಿಕರ್ತರಾಗಿದ್ದಾರೆ. ಇಂದು ರಾಜ್ಯದ ರಾಜಧಾನಿಯಾಗಿ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಶತಮಾನಗಳ ಹಿಂದೆಯೇ ಮಹಾನಗರವಾಗಿ ಹೊರಹೊಮ್ಮುವ ಕುರಿತು ಹಾಗೂ ಹವಾಮಾನ, ಭೌಗೋಳಿಕ ಅನುಕೂಲದ ಬಗ್ಗೆ ಜ್ಞಾನ ಹೊಂದಿದ್ದ ಕೆಂಪೇಗೌಡರ ದೂರದೃಷ್ಟಿಯ ಆಡಳಿತ ಮೆಚ್ಚುವಂತದ್ದು ಎಂದು ಸ್ಮರಿಸಿದರು.
ಬಳಿಕ ಗ್ರಾಮದ ಶ್ರೀ ಕೆಂಪೇಗೌಡ ಗೆಳೆಯರ ಬಳಗದಿಂದ ಶ್ರೀ ಕೆಂಪೇ ಗೌಡರ ನಾಮ ಸ್ಮರಣೆ ಸ್ಮರಿಸುತ್ತಾ ಗ್ರಾಮಸ್ಥರಿಗೆ ಅನ್ನ ಸಂತರ್ಪಣೆ ಆಯೋಜಿಸಿ ಪಟಾಕಿ ಸಿಡಿಸಿ ಅರ್ಥಪೂರ್ಣ ವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಜಗದೀಶ್, ಹೆಮ್ಮನಹಳ್ಳಿ ಶಾಲಾ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿಗೌಡ,ಗ್ರಾ. ಪಂ ಮಾಜಿ ಸದಸ್ಯ ಹೆಚ್ ಜೆ ರಮೇಶ್,ಅಣ್ಣೆಗೌಡ, ಉಮೇಶ್, ಅರ್ಜುನ್,ಪ್ರೀತಮ್ ಕುಮಾರ್, ಶೇಖರ್, ಅಭಿ, ಸಂಜಯ್, ಶ್ರೀಧರ್, ವರುಣ್, ರಕ್ಷಿತ್, ಪುನೀತ್ ಟೈಲರ್ ಗೋಪಾಲಕೃಷ್ಣ, ಪುರುಷೋತ್ತ ಮ್, ಹೆಚ್.ಟಿ.ಕೇಶವ,ಸಚಿನ್, ಹೆಮ್ಮನಹಳ್ಳಿ ಶ್ರೀ ಕೆಂಪೇಗೌಡ ಗೆಳೆಯರ ಬಳಗ ಸದಸ್ಯರು ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ