ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾಗಿ ನೇಮಕವಾದ ಎಂ.ರಮೇಶ್ ಇವರನ್ನು ಶಂಕರ ಘಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭವ್ಯ ಸ್ವಾಗತಿಸಿದರು.
ಶಂಕರಘಟ್ಟಕ್ಕೆ ಆಗಮಿಸಿದ ನೂತನ ಅಧ್ಯಕ್ಷರನ್ನು ಭದ್ರಾ ಡ್ಯಾಂನಿಂದ ಬೈಕ್ ರ್ಯಾಲಿಯ ಮೂಲಕ ಕುವೆಂಪು ವಿಶ್ವವಿದ್ಯಾಲಯದವರೆಗೆ ಕರೆತಂದು ನಿಮಿಷಾಂಭ ಕನ್ವೆನ್ಷನ್ ಹಾಲ್ ನಲ್ಲಿ ನೆಡದ ಸಮಾರಂಭದಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಗಳಾದ ಮುರುಗೇಶ್,ಇಂದೂದರ್, ರುದ್ರೇಶ್ ,ನಂದೀಶ್, ಶ್ರೀಕಾಂತ್, ಶಶಿ,ಬಾಬು ಸಿಂಗನಮನೆ ಹಾಗೂ ತಾವರಘಟ್ಟ ಗ್ರಾಮಪಂಚಾಯಿತಿ ಸದಸ್ಯರು ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರುಗಳು ಭಾಗವಹಿಸಿದ್ದರು.