ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಅಂಗವಿಕಲ ಮಕ್ಕಳನ್ನು ಸಾಕುವುದು ಪೋಷಕರಿಗೆ ಸವಾಲಾಗಿದ್ದರೂ, ಅವರ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದು ಶ್ರೀ ರಮಣ ಮಹರ್ಷಿ ಅಕಾಡೆಮಿ ಪರ್ ದಿ ಬ್ಲೈಂಡ್ ಜಿಲ್ಲಾ ಸಂಯೋಜಕ ಮಾಂತೇಶ್ ಹಿರೇಮಠ್ ತಿಳಿಸಿದರು.
ಪಟ್ಟಣದ ಹಳೆ ಮೈಸೂರು ರಸ್ತೆಯಲ್ಲಿ ರುವ ಶ್ರೀ ರಮಣ ಮಹರ್ಷಿ ಅಕಾಡೆಮಿ ಪರ್ ದಿ ಬ್ಲೈಂಡ್ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ಅಂಗವಿಕಲ ಮಕ್ಕಳಿಗೆ ಕಚೇರಿಯಲ್ಲೇ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲ ಮಕ್ಕಳ ಪೋಷಣೆ ಮಾಡುವುದು ಪೋಷಕರಿಗೆ ಸವಾಲಾಗಿದ್ದು, ಯಾವುದೇ ನ್ಯೂನತೆ ಇದ್ದರೂ ಮಕ್ಕಳಿಗೆ ಬೌದ್ಧಿಕ ಹಾಗೂ ಮಾನಸಿಕ ಬೆಂಬಲ ನೀಡುವ ಮೂಲಕ ಅವರ ಶಿಕ್ಷಣ ಪ್ರಗತಿಗೆ ಪೋಷಕರ ತ್ಯಾಗ ಹೆಚ್ಚಿದೆ.ಅಂಗವಿಕಲ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ ಮಾನಸಿಕವಾಗಿ ಅವರಿಗೆ ಬೆಂಬಲವಾಗಿ ನಿಲ್ಲುವುದು ಅವಶ್ಯಕ. ಇಂತಹ ಮಕ್ಕಳನ್ನು ಗುರುತಿಸಿ, ಅಭಿನಂದಿಸಿ ಪ್ರೋತ್ಸಾಹಿಸು ವುದೇ ಶ್ರೀ ರಮಣ ಮಹರ್ಷಿ ಅಕಾಡೆಮಿ ಪರ್ ದಿ ಬ್ಲೈಂಡ್ ಕಾಯಕ ಎಂದರು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾಂತವ್ವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಸಾಮಾನ್ಯ ಮಕ್ಕಳಿಗೆ ಸನ್ಮಾನ ಮಾಡುವುದು ಸರ್ವಸಾಮಾನ್ಯ ಆದರೆ ಈ ಪರೀಕ್ಷೆ ಯಲ್ಲಿ ಉತ್ತೀರ್ಣವಾಗುವ ವಿಶೇಷ ಚೇತನರನ್ನು ಗುರುತಿಸುವುದಿಲ್ಲ. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುವ ಇಂತಹ ವಿಶೇಷ ಚೇತನ ಮಕ್ಕಳನ್ನು ಗುರುತಿಸಿ,ಅವರಿಗೆ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಲು ಶ್ರೀ ರಮಣ ಮಹರ್ಷಿ ಅಕಾಡೆಮಿ ಪರ್ ದಿ ಬ್ಲೈಂಡ್ ವತಿಯಿಂದ ಇಂತಹ ಸಮಾಜಮುಖಿ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ವಿಚಾರ ಎಂದರು.
ಬಳಿಕ ಶಿಕ್ಷಣ ಇಲಾಖೆ ಅಧಿಕಾರಿ ಗಳಾದ ಯೋಗೇಂದ್ರ ಹಾಗೂ ರಾಜಶೇಖರ್, ಶ್ರೀ ರಮಣ ಮಹರ್ಷಿ ಅಕಾಡೆಮಿ ಪರ್ ದಿ ಬ್ಲೈಂಡ್ ಆಯೋಜಿಸಿದ ಉಚಿತ ಕಂಪ್ಯೂಟರ್ ತರಬೇತಿಯಲ್ಲಿ ಪಾಲ್ಗೊಂಡು ಕಂಪ್ಯೂಟರ್ ಕಲಿತ ವಿಶೇಷ ಚೇತನ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಯೋಗೇಂದ್ರ, ರಾಜಶೇಖರ್,ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವೇಗೌಡ, , ಶ್ರೀ ರಮಣ ಮಹರ್ಷಿ ಅಕಾಡೆಮಿ ಪರ್ ದಿ ಬ್ಲೈಂಡ್ ಕೆ.ಆರ್. ಪೇಟೆ ತಾಲೂಕು ಮೇಲ್ವಿಚಾರಕ ಪ್ರತಾಪ್ ಹೊನ್ನೇನ ಹಳ್ಳಿ, ಸ್ವಯಂಸೇವಕರಾದ ಕುಂದನ ಹಳ್ಳಿ ವಸಂತ್, ಶೀಳನೆರೆ ನಾಗರತ್ನ, ಶ್ಯಾರಹಳ್ಳಿ ಪ್ರೇಮಲತಾ, ಸೋಮನ ಹಳ್ಳಿ ಜಲೇಂದ್ರ, ಬೀರವಳ್ಳಿ ಲಕ್ಷ್ಮೀದೇವಿ, ಕಲಾವತಿ,ಸೇರಿದಂತೆ ವಿಕಲಚೇತನ ಪ್ರತಿಭಾವಂತ ವಿದ್ಯಾರ್ಥಿಗಳ ಪೋಷಕರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ