ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಫೇಸ್‌ಬುಕ್‌ನಲ್ಲಿ ಪರಿಚಯ ವಾದ ಗೃಹಿಣಿಯ ಬಳಿ ಇದ್ದ ಚಿನ್ನಾಭರಣಕ್ಕಾಗಿ ಪ್ರೀತಿಸುವ ನಾಟಕ ವಾಡಿ ಬರ್ಬರ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಕಸಬಾ ಹೋಬಳಿ ಯ ಕರೋಠಿ ಗ್ರಾಮದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಪ್ರಿಯಕರ ನಿಂದಲೇ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಕರೋಠಿ ಗ್ರಾಮದ ಪುನೀತ್(28) ಎಂಬಾತನೇ ಕೊಲೆ ಮಾಡಿ ಆರೋಪಿ ಯಾಗಿದ್ದಾನೆ.
ಘಟನೆ ವಿವರ: ಫೇಸ್‌ಬುಕ್‌ನಲ್ಲಿ ಪ್ರೀತಿ ಮತ್ತು ಪುನೀತ್ ಪರಿಚಯವಾಗಿದ್ದಾರೆ. ಇಬ್ಬರು ಮಕ್ಕಳು ಮತ್ತು ಗಂಡ ನೊಂದಿಗೆ ಹೊಸಕೊಪ್ಪಲು ಗ್ರಾಮದಲ್ಲಿ ವಾಸವಿದ್ದ ಗೃಹಿಣಿ ಫೇಸ್‌ಬುಕ್ ಮೂಲಕ ಪರಿಚಯ ವಾದ ಪುನೀತ್ ನೊಂದಿಗೆ ಲವ್ವಿ-ಡವ್ವಿ ನಡೆಸಿ, ಮೈಸೂರು-ಮಂಡ್ಯ ನಗರಗಳಲ್ಲಿ ಹಲವು ದಿನಗಳ ಕಾಲ ಸುತ್ತಾಟ ಮಾಡಿದ್ದಾರೆ.
ನಂತರ ನಮ್ಮ ಊರಿಗೆ ಹೋಗೋಣ ಎಂದು ಗೃಹಿಣಿ ಪ್ರೀತಿ ಎಂಬಾಕೆಯನ್ನು ಪುಸಲಾಯಿಸಿರುವ ಪುನೀತ್ ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಕರೋಠಿ ಗ್ರಾಮಕ್ಕೆ ಹೋಗುವುದಾಗಿ ಕರೆದುಕೊಂಡು ಬಂದಿದ್ದಾನೆ. ಮುಸ್ಸಂಜೆಯಾಗುತ್ತಿದ್ದಂತೆ ಬಿ.ಬಿ.ಕಾವಲು ಅರಣ್ಯ ಪ್ರದೇಶದಲ್ಲಿ ಉಸಿರು ಗಟ್ಟಿಸಿ ಕೊಲೆ ಮಾಡಿ ನಂತರ ಆಕೆಯ ಮೈಮೇಲಿದ್ದ ಚಿನ್ನಾಭರಣ ಗಳನ್ನು ಕಿತ್ತು ಕೊಂಡು ಕರೋಠಿ ಗ್ರಾಮದ ಜಮೀನಿನ ಬಳಿ ಬಚ್ಚಿಟ್ಟು ಪರಾರಿಯಾಗಿದ್ದಾನೆ.
ಕೊಲೆಯಾದ ಗೃಹಿಣಿಯ ಪ್ರೀತಿ ಮೊಬೈಲ್ ನಂಬರಿಗೆ ಕರೆ ಮಾಡಿದ್ದ ಹಾಗೂ ವಾಟ್ಸಪ್ ಚಾಟಿಂಗ್ ಮತ್ತು ವಿಡಿಯೋ ಕಾಲ್ ಮಾಡಿದ್ದ ಪುನೀತ್ ಎಂಬಾತನನ್ನು ಸುಲಭವಾಗಿ ಪತ್ತೆ ಹಚ್ಚಿನ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಗಂಡ ಮತ್ತು ಇಬ್ಬರು ಪುಟ್ಟ ಮಕ್ಕಳಿ ದ್ದರೂ ಪುನೀತ್ ಜೊತೆ ಲವ್ವಿ-ಡವ್ವಿ ಯಲ್ಲಿ ಬಿದ್ದಿದ್ದ ಪ್ರೀತಿ ಅಮಾನುಷ ಕೊಲೆಯಾಗಿರುವುದು ವಿಪರ್ಯಾಸವಾಗಿದೆ.
ಘಟನೆ ಕುರಿತು ಕಿಕ್ಕೇರಿ ಪೊಲೀಸ್ ಇನ್ಸ್ ಪೆಕ್ಟರ್ ರೇವತಿ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.