ಭದ್ರಾವತಿ-ಎಂಪಿಎಂ ಕಾರ್ಮಿಕರಿಗೆ ಅನ್ಯಾಯ: ಕಾರ್ಖಾನೆ ಎಂಡಿ ವಿರುದ್ಧ ಸಿಎಂ ಗೆ ಮನವಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕಾಗದ ನಗರದ ಎಂಪಿಎಂ ಕಾರ್ಖಾನೆ ನಿವೃತ್ತ ಕಾರ್ಮಿಕರಿಗೆ ಉಂಟಾಗಿರುವ ಅನ್ಯಾಯ ಸರಿಪಡಿ ಸದೆ ನಿರ್ಲಕ್ಷ್ಯವಹಿಸಿರುವ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಎಂಪಿಎಂ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ಬುಧವಾರ ಸಿಎಂ ಗೆ ದೂರು ಸಲ್ಲಿಸಲಾಯಿತು.

ಕಾರ್ಖಾನೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಮತ್ತು ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರಿಗೆ ಆಡಳಿತ ಮಂಡಳಿ ನೀಡಬೇಕಾಗಿರುವ ಬಾಕಿಗಳನ್ನು ಇಲ್ಲಿಯವರೆಗೂ ವಿತಸಿರುವುದಿಲ್ಲ. ಈ ನಡುವೆ ವಿನಾಕಾರಣ ನಿವೃತ್ತ ಕಾರ್ಮಿಕರು ನ್ಯಾಯಾಲಯಗಳಿಗೆ ಅಲೆದಾಡುವಂತಾಗಿದೆ ಎಂದು ನಿವೃತ್ತ ಕಾರ್ಮಿಕರು ಅಳಲು ತೋರ್ಪಡಿಸಿ ಕೊಂಡರು.

ಎಂಡಿ ರವರಿಗೆ ಹಲವಾರು ಬಾರಿ ಮನದಟ್ಟು ಮಾಡಿದ ಮೇಲೆ ಸರ್ಕಾರಕ್ಕೆ ಪತ್ರ ಬರೆದಿರುತ್ತಾರೆ. ಆದರೆ ಇದುವರೆಗೂ ನ್ಯಾಯ ಲಭಿಸಿರುವು ದಿಲ್ಲ. ಈಗಿನ ವ್ಯವಸ್ಥಾಪಕ ನಿರ್ದೇಶ ಕರು ಬಂದು ಒಂದು ವರ್ಷ ಗಳಾಗಿದ್ದು, ನಿವೃತ್ತ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಲಿಖಿತವಾಗಿ ಮನವಿ ಕೊಟ್ಟರೂ ಸಹ ಯಾವುದನ್ನು ಪರಿಗಣಿಸದೆ ಅನ್ಯಾಯ ಮಾಡುತ್ತಿ ದ್ದಾರೆ. ಸೂಪರ್ ಅನ್ಯುಯೇಷನ್ ಹಣದ ಬಗ್ಗೆ ಸುಮಾರು 550 ನಿವೃತ್ತ ಕಾರ್ಮಿಕರು ಸಹಿ ಮಾಡಿದ ಲಿಖಿತ ಮನವಿ ಸಲ್ಲಿಸಲಾಗಿದೆ. ಇದನ್ನು ಸಹ ಪರಿಗಣಿಸದೆ ಇದರ ಮಾತನಾಡದೆ ಬಹಳಷ್ಟು ಅನ್ಯಾಯ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರತಿ ತಿಂಗಳು 300 ರಿಂದ 1 ಸಾವಿರ ರೂ ವರೆಗೆ ಹಣ ನಿವೃತ್ತ ಕಾರ್ಮಿಕರಿಗೆ ಲಭಿಸದೆ ಅನ್ಯಾಯ ವಾಗಿದೆ. 2017 ರಲ್ಲಿ ಸ್ವಯಂ ನಿವೃತ್ತಿ ಹೊಂದಿದ ಮತ್ತು ಸಹಜ ನಿವೃತ್ತಿ ಹೊಂದಿದ ಕಾರ್ಮಿಕರುಗಳಿಗೆ ಬರ ಬೇಕಾದ ಬಾಕಿ ಹಣ ಇಲ್ಲಿಯವರೆಗೂ ಲೆಕ್ಕಾಚಾರ ಮಾಡಿ ವಿತರಿಸದೆ ಮೋಸ ಮಾಡಲಾಗಿದೆ. 2012ರ ವೇತನ ಒಪ್ಪಂದಕ್ಕಾಗಿ ನೀಡಿದ್ದ 35 ಕೋ. ರೂ. ಕಾರ್ಮಿಕರಿಗೆ ಪಾವತಿ ಮಾಡದೆ ಮೋಸ ಮಾಡಿದ್ದು, ಈ ನಡುವೆ ವಿನಾಕಾರಣ ನಿವೃತ್ತ ಕಾರ್ಮಿಕರು ನ್ಯಾಯಾಲಯಗಳಿಗೆ ಅಲೆದಾಡು ವಂತಾಗಿದೆ ಎಂದು ನಿವೃತ್ತ ಕಾರ್ಮಿಕರು ಅಳಲು ತೋರ್ಪಡಿಸಿಕೊಂಡರು.

ಕಾರ್ಖಾನೆಯನ್ನು ಪುನರ್ ಆರಂಭಿ ಸುವುದಾಗಿ ಮುಖ್ಯಮಂತ್ರಿಗಳು, ಉಪಮುಖ್ಯ ಮಂತ್ರಿಗಳು ಹಾಗು ಶಾಸಕರು ಭರವಸೆ ನೀಡಿ 2 ವರ್ಷ ಗಳಾಗಿವೆ. ಆದರೂ ಸಹ ಕಾರ್ಖಾನೆ ಇದುವರೆಗೂ ಆರಂಭಗೊಂಡಿಲ್ಲ. ಕಾರ್ಖಾನೆ ಪುನರ್ ಆರಂಭಗೊಂಡಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಲಭಿಸಲಿದೆ. ನಗರ ಬೆಳವಣಿಗೆ ಹೊಂದಲಿದ್ದು, ಆರ್ಥಿಕ ವಯಿವಾಟು ಹೆಚ್ಚಳವಾಗಲಿದೆ. ಈ ಹಿನ್ನಲೆ ಯಲ್ಲಿ ತಕ್ಷಣ ಕಾರ್ಖಾನೆ ಆರಂಭಿಸಬೇಕೆಂದು ಮನವಿ ಮಾಡಿದರು.

ವೇದಿಕೆ ಪ್ರಧಾನ ಸಂಚಾಲಕ ಬಸವರಾಜಯ್ಯ ನಿವೃತ್ತ ಕಾರ್ಮಿಕರಿಗೆ ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರದಿಂದ ನ್ಯಾಯಯುತ ವಾಗಿ ಲಭಿಸಬೇಕಾದ ಸೌಲಭ್ಯಗಳು ಹಾಗು ಬಾಕಿ ಕುರಿತು ವಿವರಿಸಿದರು. ಸಂಚಾಲಕರಾದ ವಿ. ಗೋವಿಂದಪ್ಪ, ಕೆ.ಜಿ ವೆಂಕಟೇಶ್ ಮೂರ್ತಿ, ಎನ್. ರಘುನಾಥರಾವ್‌, ಶಿವಲಿಂಗಯ್ಯ ಮತ್ತು ಆರ್. ಬಾಪು ಉಪಸ್ಥಿತರಿದ್ದರು. ನೂರಾರು ನಿವೃತ್ತ ಕಾರ್ಮಿಕರು ಪ್ರತಿಭಟನೆಗೂ ಮುನ್ನ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.

ನಂತರ ಬಸವೇಶ್ವರ ವೃತ್ತದಿಂದ ಮಾಧವ ಚಾರ್ ವೃತ್ತ ಹಾಗು ರಂಗಪ್ಪ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ನಂತರ ತಾಲೂಕು ಕಛೇರಿಗೆ ತೆರಳಿ ಉಪ ತಹಸೀಲ್ದಾ‌ರ್ ಮಂಜಾನಾಯ್ಕರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ನಿವೃತ್ತ ಕಾರ್ಮಿಕರ ಹೋರಾಟಕ್ಕೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್. ರವಿಕುಮಾರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕೆಆರ್ ಎಸ್ ಪಕ್ಷದ ತಾಲೂಕು ಅಧ್ಯಕ್ಷ ತೀರ್ಥೇಶ ಸೇರಿದಂತೆ ಇನ್ನಿತರರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು