ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹಳೇನಗರದ ಭೂತನ ಗುಡಿ ನಿವಾಸಿ ಐಶ್ವರ್ಯ ಶರ್ಮ ಇವರಿಗೆ ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ ಕೊಡ ಮಾಡುವ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿ ದ್ದಾರೆ.
ಕಳೆದ 10 ವರ್ಷಗಳಿಂದ ಚಿತ್ರಕಲೆ, ಮೆಹೆಂದಿ & ಟ್ಯಾಟೊ ಕಲೆಯಲ್ಲಿ ತೊಡಗಿರುವ ಇವರ ಸೇವೆಯನ್ನು ಗುರುತಿಸಿ ರಾಷ್ಟ್ರಪ್ರಶಸ್ತಿ ದೊರಕಿದೆ. ಬಾಲ್ಯದಿಂದಲೂ ಕಲೆಯ ಗೀಳು ಹಚ್ಚಿಕೊಂಡ ಇವರು. ಹಲವಾರು ಪ್ರಶಸ್ತಿಗಳು ಲಭಿಸಿವೆ. ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ ಕೊಡ ಮಾಡುವ ರಾಷ್ಟ್ರಪ್ರಶಸ್ತಿಗೆ ಭಾಜನ ರಾದ ಇವರಿಗೆ ನಗರದ ವಿವಿಧ ಸಂಘ ಸಂಸ್ಥೆಗಳು ಅಭಿನಂದಿಸಿವೆ.