ಭದ್ರಾವತಿ-ಸಹ್ಯಾದ್ರಿ ಕಾಲೇಜ್ ಆಡಳಿತ ಮಂಡಳಿ ವಿರುದ್ಧವೇ ದೂರು ದಾಖಲಾಗಬೇಕು: ತೀರ್ಥೇಶ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಸಹ್ಯಾದ್ರಿ ಕಾಲೇಜಿನಲ್ಲಿ ಎರಡು ಶ್ರೀಗಂಧದ ಮರ ಪತ್ತೆಯಾದ ಬೆನ್ನಲ್ಲೇ ಕೆಆರ್ ಎಸ್ ಪಕ್ಷ ಹಾಗೂ ಕ ರ ವೇ ಯಿಂದ ಉಂಬ್ಳೇಬೈಲು ವಲಯ ಅರಣ್ಯಾಧಿಕಾರಿ ಎಂ.ಸಿಂಧೂ ರವರಿಗೆ ಸಹ್ಯಾದ್ರಿ ಕಾಲೇಜು ಆಡಳಿತ ಮಂಡಳಿಯ ವಿರುದ್ಧವೇ ದೂರು ದಾಖಲಾಗಬೇಕೆಂದು ಮನವಿ ಸಲ್ಲಿಸಲಾಯಿತು. 

ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ಶ್ರೀಗಂಧ ಮರ ಹಾಗೂ ಇತರ ಜಾತಿ ಪ್ರಭೇದದ ಮರಗಳನ್ನು ಕಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿಯ ಎಸ್ಟೇಟ್ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಹಾಗೂ ಯಾವುದೇ ಆಮಿಷಗಳಿಗೆ, ಹಾಗೂ ರಾಜಕೀಯ ಪ್ರಭಾವಗಳಿಗೆ ಒಳಗಾಗದೆ ಪ್ರಾಮಾಣಿಕತೆಯಿಂದ ತನಿಖೆ ನಡೆಸಿ ಗಂಧದ ಮರ ಕಡೆದ ಆರೋಪಿಗಳಿಗೆ ಶಿಕ್ಷೆ ಯಾಗುವಂತೆ ಮನವಿಯಲ್ಲಿ ಒತ್ತಾಯಿಸಿದರು. 

ಕೆ ಆರ್ ಎಸ್ ಪಕ್ಷದ ತಾಲೂಕ ಅಧ್ಯಕ್ಷ ತೀರ್ಥೇಶ್ ನೇತೃತ್ವವಹಿಸಿದ್ದರು. ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಮೊಹಮ್ಮದ್ ಸಲ್ಮಾನ್, ಅಮ್ಜದ್, ಮಂಜುನಾಥ್ ಗೌಡ, ಪ್ರಶಾಂತ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು