ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹಿಂದುತ್ವ ಎನ್ನುವ ಹೆಸರನ್ನು ಭಾರತೀಯರಾದ ನಾವು ಗಳು ಇಟ್ಟುಕೊಂಡ ಹೆಸರಲ್ಲ ನಮ್ಮಲ್ಲಿದ್ದ ಮಾನವೀಯ ಗುಣ ಗಳನ್ನು ಕಂಡು ಅನ್ಯರು ನಮ್ಮನ್ನು ಗುರುತಿಸಿ ರುವ ಸಲುವಾಗಿ ಅವರು ಇಟ್ಟಿರುವ ಹೆಸರು ಎಂದು ಹವ್ಯಾಸಿ ಲೇಖಕ ಶೈಲೇಶ್ ಕುಲಕರ್ಣಿ ಹೇಳಿದರು.
ಅವರು ಸೋಮವಾರ ಹಳೇನಗರದ ಶ್ರೀವೀರಭದ್ರೇಶ್ವರಸ್ವಾಮಿ ಸಮು ದಾಯ ಭವನದಲ್ಲಿ ಮಂಥನದವತಿ ಯಿoದ ಏರ್ಪಡಿಸಿದ್ದ ಹಿಂದುತ್ವ ಪುಸ್ತಕದ ಕುರಿತಾದ ಉಪನ್ಯಾಸ ಹಾಗು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೂ ಧರ್ಮದ ಆಚರಣೆಯ ಭಾಗಗಳೆಲ್ಲವೂ ಹಿಂದುತ್ವ ಎಂದು ಕರೆಯಲಾಯಿತು. ಇವುಗಳನ್ನು ಆಳವಡಿಸಿಕೊಂಡವ ಹಿಂದೂ ಎಂದು ಕರೆಯಲಾಯಿತು.ಹಿಂದುತ್ವ ಎಂಬು ದನ್ನು ಸೀಮಿತವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಅದು ಸೀಮಾತೀತ, ಕಾಲಾತೀತವಾದ ಸನಾತನಧರ್ಮ. ಎಲ್ಲರನ್ನೂ ಗೌರವಿಸುತ್ತಲೇ ತನ್ನ ಅಂತಃಸತ್ವವನ್ನು ಪ್ರತಿಯೊಬ್ಬರ ಜೀವನದ ಕ್ರಮಗಳಲ್ಲಿ ಬಿಂಭಿಸುತ್ತಾ ವಿಶ್ವದಸರ್ವ ಚರಚರ, ಜೀವರಾಶಿಗಳ ಯೋಗಕಗಕ್ಷೇಮಕ್ಕೆ ಆಧ್ಯತೆ ನೀಡುತ್ತಾ ಬಂದಿದೆ. ರಾಮಾಯಣ, ಮಹಾ ಭಾರತದ ಪಾತ್ರಗಳು,ಸನ್ನಿವೇಶಗಳು ನಮಗೆ ಈನೆಲದ ಸಂಸ್ಕೃತಿ, ಸoಸ್ಕಾರ, ತಿಳಿಸುವುದರ ಜೊತೆಗೆ ಯಾವುದು ಸರಿ, ಯಾವುದು ತಪ್ಪು,ಜೀವನದಲ್ಲಿ ಹೇಗಿರಬೇಕು ಏನು ಮಾಡದಿರೆ ಏನಾಗುತ್ತದೆ ಮಾಡದಿದ್ದರೆ ಏನಾಗು ತ್ತದೆ ಎಂಬುದನ್ನು ಸರ್ವಕಾಲಕ್ಕೂ ಎಲ್ಲದಕ್ಕೂ ಸ್ಪಷ್ಠ ಉತ್ತರವನ್ನು ನೀಡುತ್ತಾ ಬಂದಿರುವ ಜೀವನದ ಕ್ರಮವಾಗಿದೆ.
ದಾಸರು,ದಾರ್ಶನಿಕರು,ಶರಣರು,ತಮ್ಮ,ತಮ್ಮಕೃತಿಗಳಲ್ಲಿ ನಡವಳಿಕೆಗಳಲ್ಲಿ ಈ ಸನಾತ ನತೆಯ ಸಾರವನ್ನು ಕಾಲ, ಕಾಲಕ್ಕೆ ತಿಳಿಸುತ್ತಾ ಬಂದಿದ್ದಾರೆ. ಜೀವನದಲ್ಲಿ ಐಹಿಕಸಂಪತ್ತನ್ನು ಸತ್ತಾಗ ಒಯ್ಯಲು ಸಾಧ್ಯವಿಲ್ಲ, ಜೀವನದಲ್ಲಿ ಮಾಡುವ ಪರೋಪಾಕಾರ, ಪುಣ್ಯ ಕಾರ್ಯ ಗಳಿಂದ ಮಾತ್ರ ಭಗವಂತನ ಕಾರುಣ್ಯಕ್ಕೆ ಮನುಷ್ಯ ಪಾತ್ರನಾಗಲು ಸಾಧ್ಯ ಎಂಬುದನ್ನು ಈ ಸನಾತನ ಧರ್ಮ ಸಾಬೀತು ಪಡಿಸುತ್ತಾ ಬಂದಿದೆ.
ಅನ್ಯಧರ್ಮದವರು ಅವರ ಧರ್ಮವೇ ಎಲ್ಲ ಧರ್ಮಕ್ಕಿಂತ ಶ್ರೇಷ್ಠ ಅವರ ಧರ್ಮದನುಯಾ ಯಿಗಳ ಸಂಖ್ಯೆ ಹೆಚ್ಚಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದು ಕೆಲಸಮಾಡುತ್ತಾರೆ ಆದರೆ ನಮ್ಮ ಸನತನಧರ್ಮ ಎಲ್ಲಾ ಧರ್ಮವರನ್ನೂ ಗೌರವಿಸುತ್ತ ತನ್ನ ಶ್ರೇಷ್ಠತೆಯನ್ನು ಜಗತ್ತೇ ಗುರುತಿಸುವರೀತಿಯ ಸಂಸ್ಕಾರ ವನ್ನು ಆಚಾರ ವಿಚಾರಗಳ ಸಾಂಗತ್ಯ ದೊoದಿಗೆ ಜೀವನದ ಕ್ರಮವಾಗಿ ಹೇಗೆ ಇರಬೇಕು ಎಂಬುದನ್ನು ಜಗತ್ತಿಗೆ ಆದರ್ಶಪ್ರಾಯವಾಗಿ ಅನುಷ್ಠಾನ ಮಾಡುತ್ತಾ ಎಲ್ಲರ ಗೌರವಾಧಾರಗಳಿಗೆ ಪಾತ್ರವಾಗಿದೆ.
ಹಿಂದುತ್ವ ಎನ್ನುವ ಈ ಪುಸ್ತಕವು ಹಿಂದುತ್ವದ ಪ್ರಸ್ತುತತೆ ಏನು ಎನ್ನುವುದರ ಕುರಿತಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಚಾಲಕರಾದ ಡಾ.ಮೋಹನ್ ಭಾಗವತ್ ಹಾಗೂ ಸರಸಂಘ ವಾಹಕರಾಗಿರುವ ಅರುಣ್‌ಕುಮಾರ್ ಹಾಗೂ ವಿದೇಶಗಳಲ್ಲಿ ಹಿಂದೂ ಸಂಘಟನೆಯ ಕಾರ್ಯನಿರ್ವಹಿಸಿ ರುವ ಸುರೇಶ್‌ಸೋನಿ ಅವರುಗಳು ಬೇರೆ, ಬೇರೆ ಸಂದರ್ಭಗಳಲ್ಲಿ ಸನಾತನ ಹಿಂದೂ ಧರ್ಮದ ಕುರಿತಂತೆ ಮಾಡಿ ರುವ ಭಾಷಣಗಳ ಸಂಗ್ರಹವಾಗಿದೆ ಎಂದರು.
ನ್ಯಾಯವಾದಿ ಹಾಗು ಮಂಥನದ ಸoಚಾಲಕ ಕೆ.ಎನ್.ಶ್ರೀಹರ್ಷ ಪ್ರಾಸ್ತಾವಿಕ ನುಡಿಗಳನ್ನಾಡಿ ಮಂಥನವು ರಾಷ್ಟ್ರೀಯ ವಿಚಾರ ಧಾರೆ ಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಜನರಿಗೆ ತಿಳಿಸುವ ಮತ್ತು ಜನರೂ ಸಹ ಅದರಲ್ಲಿ ಭಾಗಿಯಾಗುವ ಅವಕಾಶ ವನ್ನು ಒಸಗಿಸುವ ನಿಟ್ಟಿನಲ್ಲಿ ಈರೀತಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದರು.
ವೀರಶೈವ ಸೇವಾ ಸಮಿತಿಯ ಅಧ್ಯಕ್ಷ ಆರ್.ಮಹೇಶ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯವಾದಿ ಆಶಾ ಸುಧೀರ್ ಪ್ರಾರ್ಥಿಸಿ, ರಾಜಶೇಖರ್ ಉಪ್ಪರ್ ಸ್ವಾಗತಿಸಿದರೆ, ಕೀರ್ತಿ ಎನ್ ಗುಜ್ಜಾರ್ ನಿರೂಪಿಸಿ, ಕೇಶವ ಮೂರ್ತಿ ವಂದಿಸಿದರು.
ಕಾರ್ಯಕ್ರಮದ ನಂತರ ಹಿಂದುತ್ವದ ಕುರಿತಂತೆ ಇರುವ ಸವಾಲು ಅದಕ್ಕೆ ಪರಿಹಾರ ಏನು ಎಂಬಿತ್ಯಾದಿ ವಿಷಯ್ಳ ಕುರಿತಂತೆ ಶ್ರೋತೃಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
Tags
ಭದ್ರಾವತಿ ವರದಿ