ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ 700 ವರ್ಷದ ಪುರಾತನ ದೇವಸ್ಥಾನದ ಗ್ರಿಲ್ ಕಟ್ ಮಾಡಿ ಕಾಣಿಕೆ ಹುಂಡಿಯನ್ನು ಕದ್ದಿರುವ ಘಟನೆ ಶನಿವಾರ ರಾತ್ರಿ ಹಳೇನಗರದ ಭೂತನಗುಡಿಯಲ್ಲಿ ನಡೆದಿದೆ.
ಸುಮಾರು ಮೂರು ವರ್ಷದಿಂದ ಕಾಣಿಕೆ ಹಣ ಎಣಿಕೆ ಮಾಡದ ಹುಂಡಿಯನ್ನೇ ಕಳ್ಳರು ದೇವಾಲಯದ ಗ್ರಿಲ್ ಕಟ್ ಮಾಡಿ ಒಳಗೆ ನುಗ್ಗಿ ಕದ್ದೊಯ್ದಿದ್ದಾರೆ. ಹುಂಡಿಯಲ್ಲಿ ಲಕ್ಷಾಂತರ ರೂ.ಹಣ ಇತ್ತು ಎನ್ನಲಾಗಿದೆ.
ಭಾನುವಾರ ಬೆಳಗ್ಗೆ ದೇವಾಲಯಕ್ಕೆ ಅರ್ಚಕರು ಬಂದಾಗ ದೇವಾಲಯದ ಒಳಗಿನ ಹುಂಡಿಯ ಬೀಗ ಒಡೆದಿರು ವುದು ಕಂಡು ಬಂದಿದೆ. ನಂತರ ಗೋಡೆಯ ಗ್ರಿಲ್ ಕಟ್ ಮಾಡಿದ್ದು ಗಮನಕ್ಕೆ ಬಂದಿದೆ. ತಕ್ಷಣ ದೇವಾಲಯದ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದು, ಆಡಳಿಯ ಮಂಡಳಿಯವರು ಹಳೇನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ದೇವಾಲಯವನ್ನು ಪರಿಶೀಲಿ ಸಿದ್ದು, ಫಿಂಗರ್ ಪ್ರಿಂಟ್ ಹಾಗೂ ಶ್ವಾನದಳ ವನ್ನು ಕರೆಸಿ ಶೋಧ ಕಾರ್ಯ ನಡೆಸಿದ್ದಾರೆ. ಇದು ಜನನಿಬಿಡ ರಸ್ತೆಯಾಗಿದ್ದು ಇಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ಅಚ್ಚರಿ ತಂದಿದೆ. ಈ ದೇವಾಲಯದಲ್ಲಿ ಭೂತಪ್ಪ, ಗಣಪತಿ ಹಾಗೂ ಶನಿ ದೇವರ ಮೂರ್ತಿಗಳಿವೆ. ಇದೇ ಮೊದಲ ಬಾರಿಗೆ ದೇವಾಲಯದಲ್ಲಿ ಕಳ್ಳತನ ನಡೆದಿದೆ.