ಭದ್ರಾವತಿ-ಇಲ್ಲೆಲ್ಲಾ ನಾಳೆ ಬೆಳಿಗ್ಗೆಯಿಂದ ಕರೆಂಟ್ ಇರಲ್ಲ.?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗ ಶಿವರಾಮ ನಗರ ಹಾಗೂ ವಿಶ್ವೇಶ್ವರಯ್ಯ ನಗರ ಭಾಗದಲ್ಲಿನ ಪರಿವರ್ತಕಗಳ ಶಿಥಿಲ ಗೊಂಡ ವಾಹಕಗಳ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು.4ರ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಶಿವರಾಮನಗರ, ವಿಶ್ವೇಶ್ವರಯ್ಯ ನಗರ, ಜೇಡಿಕಟ್ಟೆ, ಹೊಸೂರು, ಸಿರಿಯೂರು, ವೀರಾಪುರ,ಕಲ್ಲಹಳ್ಳಿ, ಸಂಕ್ಲಿಪುರ, ಹಾಗಲ ಮನೆ, ಹುಲಿರಾಮನಕೊಪ್ಪ, ಸಿರಿಯೂರು ತಾಂಡ, ಸಿರಿಯೂರು ಕ್ಯಾಂಪ್ ಸೇರಿದಂತೆ ಇತ್ಯಾದಿ ಪ್ರದೇಶ ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗ ಲಿದ್ದು, ಗ್ರಾಹಕರು ಸಹರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು