ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಪಟ್ಟಣದ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೈದ್ಯ-ಪತ್ರಿಕಾ ದಿನಾಚರಣೆ, ಹಾಗೂ ಮಂಡ್ಯ ಜಿಲ್ಲಾ ಸಂಸ್ಥಾಪನಾ ದಿನಾಚರಣೆ ಯನ್ನು ಆಚರಿಸಲಾಯಿತು.
ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾ ಪಂ ಅಧ್ಯಕ್ಷ ಎ.ಸಿ.ದಿವಿಕುಮಾರ್ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿ ಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಎ.ಸಿ. ದಿವಿಕುಮಾರ್ ಅವರು ಶಾಲೆಯಲ್ಲಿ ವೈದ್ಯ, ಪತ್ರಿಕಾ ದಿನಾಚರಣೆಗಳ ಮಾಡುವುದರಿಂದ ಮಕ್ಕಳಲ್ಲಿ ವೈದ್ಯರು ಮತ್ತು ಮಾಧ್ಯಮಗಳ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗ ದರ್ಶನ ನೀಡುವುದರ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ಸಾಧ್ಯ. ಮಕ್ಕಳು ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗೆ ಉತ್ತಮ ಬೆಲೆಯನ್ನು ನೀಡಲಾಗಿದೆ ಅದನ್ನು ಉಳಿಸಿ ಬೆಳೆಸುವ ಕೆಲಸ ಪತ್ರಕರ್ತರ ಮೇಲಿದೆ ಎಂದು ಹೇಳಿದರು.
ತಾಲ್ಲೂಕು ಆಯುಷ್ ವೈದ್ಯಾಧಿಕಾರಿ ಡಾ.ಸುಬ್ರಮಣ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿ ಗಳ ದೈಹಿಕ ಮಾನಸಿಕ ಉತ್ತಮವಾಗಿ ಇರಬೇಕು ಆಗ ಮಾತ್ರ ಉತ್ತಮವಾದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ.
ಮಕ್ಕಳು ಮೊಬೈಲ್ ಮತ್ತು ಟಿವಿ ಯಿಂದ ದೂರ ಇರಬೇಕು ಅವುಗಳನ್ನು ನಿತ್ಯ ಹೆಚ್ಚು ಬಳಸುವುದರಿಂದ ಕಣ್ಣು ಮತ್ತು ಮನಸ್ಸಿನ ಮೇಲೆ ದುಷ್ಪರಿ ಣಾಮ ಬೀರುತ್ತದೆ. ಆದುದ ರಿಂದ ಅವುಗಳನ್ನು ನಿಯಂತ್ರಿಸಬೇಕು ಓದಿನ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.
ಪತ್ರಕರ್ತ ಆರ್.ಶ್ರೀನಿವಾಸ್ ಮಾತನಾಡಿ, ಪತ್ರಿಕೆಗಳು ಇಂದು ಹೆಚ್ಚು ಮಹತ್ವದ ಕೆಲಸ ನಿರ್ವಹಿಸುತ್ತಿದೆ ವರದಿಗಾರರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮ ಜನ ಸಾಮಾನ್ಯರ ಅತ್ಯಂತ ನಂಬಿಕಸ್ತ ಅಸ್ತ್ರ ವಿದ್ದಂತೆ, ಅದು ತನ್ನ ಪತ್ರಿಕೋದ್ಯಮಕ್ಕೆ ಸದಾ ಸತ್ಯ - ನಿಷ್ಠೆ ಪ್ರಾಮಾಣಿಕತೆ, ನಿಸ್ಪಕ್ಷಪಾತತೆ, ಧರ್ಮನಿರಕ್ಷೇಪ ನಿರ್ಭಯ-ನಿರ್ಲಭ, ನಿರ್ಮಲವಾದ ನಿಸ್ವಾರ್ಥ ಮನೋವೃತ್ತಿ ಅಳವಡಿಸಿಕೊಂಡಿರಬೇಕು. ಆಗಲೇ ಆ ಪತ್ರಿಕೋದ್ಯಮವೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮನದಲ್ಲಿ ನಂಬಿಕೆ, ವಿಶ್ವಾಸ ಉಳಿಸಿ ಬೆಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲರಾದ. ಕೆ. ಕಾಳೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿ ಶಿಕ್ಷಣ ಸಂಸ್ಥೆಯ ಕಾರ್ಯ ನಿರ್ವಹಣೆ ಅಧಿಕಾರಿ ಹಾಗೂ ಆಹಾರ ತಜ್ಞರಾದ ಡಾ.ಎಂ.ಕೆ.ಮೋನಿಕಾ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಭಾಷಣ ಮಾಡಿದರು. ಗೋವಾದಲ್ಲಿ ನಡೆದ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಕುಮಾರಿ ಜಿ.ಎ.ಧನ್ಯ ,ಕೆ.ಎಂ.ಅಶ್ವಿನ್ ಹಾಗೂ ತೇಜಸ್ ಅವರನ್ನು ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರಾಟೆ ಶಿಕ್ಷಕ ಹೇಮಂತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Tags
ಕೆ ಆರ್ ಪೇಟೆ ವರದಿ