ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡ ಬೆನ್ನಲ್ಲೇ ಜಿಲ್ಲೆಯ ಹಲವು ತಾಲೂಕಗಳ ಶಾಲಾ ಮತ್ತು ಅಂಗನವಾಡಿ ರಜೆ ಘೋಷಿಸಲಾಗಿದೆ.
ಈಗಾಗಲೇ ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ ರಜೆ ಘೋಷಿಸಿರುವ ತಾಲೂಕು ದಂಡಾಧಿ ಕಾರಿಗಳು, ಈಗ ಭದ್ರಾವತಿ ದಂಡಾಧಿಕಾರಿಗಳು ಸಹ ರಜೆ ಘೋಷಿಸಿದ್ದಾರೆ.
ಮಳೆಯ ಪ್ರಮಾಣ ಇಳಿಮುಖವಾಗದ ಕಾರಣದಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಸಹ ರಜೆ ವಿಸ್ತರಣೆ ಮಾಡಲಾಗಿದೆ.