ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ರಸ್ತೆ ನಿಯಮಗಳನ್ನು ಪ್ರತಿ ಯೊಬ್ಬರು ಕಡ್ಡಾಯವಾಗಿ ಪಾಲಿಸಲೇ ಬೇಕು ಆದ್ದರಿಂದ ರಸ್ತೆ ಅಪಘಾತ ಗಳನ್ನು ತಪ್ಪಿಸ ಬಹುದು ಈಗಾಗಲೇ ರಸ್ತೆ ಅಪಘಾತದಿಂದ ಸಾಕಷ್ಟು ಜನ ರಸ್ತೆಯಲ್ಲಿ ಪ್ರಾಣವನ್ನು ಬಿಡುತ್ತಿದ್ದಾರೆ. ವೇಗವಾಗಿ ಚಲಿಸುವುದು. ಹೆಲ್ಮೆಟ್ ಹಾಕದೇ ಇರುವುದು. ಸೀಟ್ ಬೆಲ್ಟ್ ಧರಿಸದೆ ಇರುವುದು, ಮಧ್ಯಪಾನ ಮಾಡಿ ವಾಹನ ಚಲಾಯಿಸುವುದು ಇದರಿಂದ ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ. ಜೀವಕ್ಕಿಂತ ಅಮೂಲ್ಯ ವಾದ ವಸ್ತು ಬೇರೆ ಇಲ್ಲ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಪಾಲನೆ ಮಾಡಲೇಬೇಕು ಎಂದು ಎಸ್ಪಿ ಮಿಥುನ್ ಕುಮಾರ್ ನುಡಿದರು.
ಅವರು ಬುಧವಾರ ನಗರದ ಉಷಾ ನರ್ಸಿಂಗ್ ಹೋಮ್, ಬಳಿ ಅಕ್ಕಮಹಾದೇವಿ ಸರ್ಕಲ್ ನಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದರು.
ಮಾಜಿ ಕಾರ್ಪೊರೇಟರ್ ಎಚ್. ಸಿ. ಯೋಗೇಶ್ ಮಾತನಾಡುತ್ತಾ. ಪೋಲಿಸ್ ಇಲಾಖೆ ಸಿಬ್ಬಂದಿಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಂಪೂರ್ಣ ಬೆಂಬಲ ನೀಡಿದ್ದು ಇದರಿಂದ ಬಹಳ ಉತ್ತಮವಾದ ಕಾರ್ಯ ನಡೆಯುತ್ತಿದೆ ಎಂದು ಶ್ಲಾಘಿಸಿದರು.
ನಾಗರೀಕರ ಪರವಾಗಿ ಬಳ್ಳೇಕೆರೆ ಸಂತೋಷ ಜಿಲ್ಲಾ ಪೊಲೀಸ್ ಇಲಾಖೆಗೆ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್, ಸಂಚಾರಿವೃತ್ತ ನಿರೀಕ್ಷಕ ದೇವರಾಜ್, ತಿರುಮಲೇಶ್, ನವೀನ್ ಮಠಪತಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆಆರ್ ಸೋಮನಾಥ್. ದಿನೇಶ್ ಶೆಟ್
ರಾಜೇಂದ್ರ. ಹರೀಶ್. ಗಿರಿರಾಜ್. ಗೋಪಾಲ ಹಾಗೂ ಪೊಲೀಸ್ ಇಲಾಖೆಯವರು ಉಪಸ್ಥಿತರಿದ್ದರು.
Tags
ಶಿವಮೊಗ್ಗ ವರದಿ