ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕೊರೋನಾ ಸಮಯದಲ್ಲಿ ಆರಂಭಗೊಂಡ ಬರವಣಿಗೆಯು ಇಂದು ಒಂದು ಸಂಸ್ಥೆಯನ್ನು ಸ್ಥಾಪಿಸಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಈ ಹಂತಕ್ಕೆ ಬೆಳೆದಿರು ವುದು ಸಂತೋಷದ ವಿಷಯ ಎಂದು ಮೈಸೂರು ಸಾಹಿತಿ ಅನಂತ ತಾಮ್ಹನ್ಕರ್ ಹೇಳಿದರು.
ಶ್ರೀಶಾ ಕಲಾ ವೇದಿಕೆ ಮತ್ತು ಸಿರಿಗನ್ನಡ ವೇದಿಕೆ ರಾಜಾಜಿನಗರ ಶಾಖೆ ಬೆಂಗಳೂರು ಸಹಯೋಗದಲ್ಲಿ ಈಚೆಗೆ ಬೆಂಗಳೂರಿನ ಮಹಾಲಕ್ಷ್ಮೀಪುರಂ ಸಮುದಾಯ ಭವನದಲ್ಲಿ ಆಯೋಜಿ ಸಲಾಗಿದ್ದ ಗುರುವಂದನೆ, ಬಹುಮಾನ ವಿತರಣೆ, ಸನ್ಮಾನ ,ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿ, ಶುಭ ಹಾರೈಸಿದರು.
ಪರಿಸರ ಅಳಿವು ಉಳಿವು ಕವನ ರಚನಾ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ ನಿವೃತ್ತ ಪ್ರಾಧ್ಯಾಪಕರು, ಚಿಂತಕರು ಆದ ಡಾ.ಸುಪ್ರಭಾ ಹೆಚ್.ಕೆ, ಪರಿಸರ ಕುರಿತ ಕವನ ರಚನೆಗಳು ಒಂದಕ್ಕಿಂತ ಒಂದು ಸೊಗಸಾಗಿದ್ದು, ರಚಿಸಿದ ಕವಿಗಳ ಕುರಿತು ಹಾಗೂ ವೇದಿಕೆಯ ಕುರಿತು ಪ್ರಶಂಸನಾ ನುಡಿಗಳನ್ನಾಡಿದರು.
ಸಿರಿಗನ್ನಡ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಸಿ.ಎನ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆ ಪ್ರಾರಂಭವಾಗಿ ಕೇವಲ ಆರು ತಿಂಗಳಾಗಿದ್ದು, ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಹಲವು ಕವಿಗಳಿಗೆ ಪ್ರತಿಭೆಗಳಿಗೆ ಅವಕಾಶ ಪ್ರೋತ್ಸಾಹ ನೀಡುತ್ತಾ, ಸ್ಪರ್ಧೆಗಳನ್ನು ಆಯೋಜಿಸುತ್ತಾ ಕಾರ್ಯಕ್ರಮಗಳನ್ನು ನಡೆಸುತ್ತಿರು ವುದು ಸಂತಸದ ವಿಷಯ. ಸಂಸ್ಥೆ ಇನ್ನೂ ಉತ್ತಮವಾಗಿ ಬೆಳೆದು ಹಲವಾರು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಿ ಎಂದರು.
ವಿಶೇಷ ಆಹ್ವಾನಿತರಾಗಿ ಅದ್ಭುತ ಗಾಯಕ ಶಶಿಧರ ಕೋಟೆ ತಮ್ಮ ಗಾಯನದ ಮೂಲಕ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು.
ಭದ್ರಾವತಿ ನಗರ, ಗ್ರಾಮಾಂತರ ಪ್ರದೇಶದಲ್ಲಿ ಹಾಗೂ ಸುತ್ತಮುತ್ತಲಲ್ಲಿ ಸುಮಾರು 18 ರಿಂದ 20 ಸದಸ್ಯರು ಇರುವ ಭಜನಾ ತಂಡಗಳಿಗೆ ಸುಮಾರು ಹತ್ತಾರು ವರ್ಷಗಳಿಂದ ಭಜನೆ ಹರಿಕಥೆ, ಶನಿಕತೆಗಳನ್ನು ನಡೆಸಿ ಕೊಡುತ್ತಾ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು, ಅಲ್ಲಿಯೂ ಸಹ ಭಜನೆ ತರಗತಿಗಳನ್ನು ಆಸಕ್ತರಿಗೆ ನಡೆಸುತ್ತಿ ರುವ ನಾರಾಯಣ ಶೆಟ್ಟರಿಗೆ ಶ್ರೀಶಾ ಕಲಾ ವೇದಿಕೆಯಿಂದ ಗೌರವಿಸುವುದರ ಮೂಲಕ ಗುರು ವಂದನೆಯನ್ನು ಸಲ್ಲಿಸಿ,ವಿಶೇಷ ಚೇತನ ಯುವ ಗಾಯಕ ಜೀವನ್ ರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಕವನ ರಚನಾ ಸ್ಪರ್ಧೆಯಲ್ಲಿ ವಿಜೇತ ರಾದ ಲಕ್ಷ್ಮೀದೇವಿ ಕಡೂರು, ಲೀಲಾ ಗುರುರಾಜ್ ತುಮಕೂರು, ವೈಷ್ಣವಿ ಸುಧೀಂದ್ರ ರಾವ್ ಮಂಗಳೂರು, ರಾಧಾಮಣಿ ಎಂ ಕೋಲಾರ, ಗೊರೂರು ಜಮುನಾ,ಶಾರದ ಗುಂಡುರಾವ್ ಶಿವಮೊಗ್ಗ, ರಮಾ ಕೆ ಸಾಗರ, ಆಶಾ.ಕೆ. ಮೂರ್ತಿ ಶಿವಮೊಗ್ಗ, ಭಾಗ್ಯ ಜಿ ಬೋಗಾದಿ ಮೈಸೂರು, ಬಿ ಸಂತೋಷ್ ಕುಮಾರಿ ಹಾಸನ ಇವರಿಗೆ ಬಹುಮಾನ ವಿತರಿಸಲಾಯಿತು.
ಬಿಂದುಶ್ರೀ, ಚಂದನ ಎಸ್, ಇಂಚರ, ಭುವನ, ಪ್ರಭ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು.
ಇದೆ ಸಂದರ್ಭದಲ್ಲಿ ಕವಿಗಳಿಂದ ಹಾಗೂ ಗಾಯಕರಿಂದ ಕವನ ವಾಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಿತು. ವೇದಿಕೆಯ ಅಧ್ಯಕ್ಷ ರಾದ ಶಾಂತಾಮೂರ್ತಿ, ಶಾಂತ ಅನಿಲ್ ಇವರನ್ನು ಸನ್ಮಾನಿಸಲಾಯಿತು.
ಶೈಲಜಾ ರಾವ್ ಪ್ರಾರ್ಥಿಸಿ, ಶ್ರೀಶಾ ಕಲಾ ವೇದಿಕೆ ಅಧ್ಯಕ್ಷರಾದ ಆಶಾ ಶ್ರೀಧರ್ ಇವರು ಸ್ವಾಗತಿಸಿದರೆ, ಬಸವಲಿಂಗ ನಿರೂಪಿಸಿದರು.
ಸಿರಿಗನ್ನಡ ವೇದಿಕೆಯ ಅಧ್ಯಕ್ಷರಾದ ಶಾಂತಾಮೂರ್ತಿ, ಶ್ರೀಶಾ ಕಲಾ ವೇದಿಕೆಯ ಗೌರವಾಧ್ಯಕ್ಷ ಶ್ರೀಧರ್, ಮಾಲತಿ ಎಸ್ ಆರಾಧ್ಯ,ಪದ್ಮಾ ಮಂಜುನಾಥ್, ವೆಂಕಟ ರಂಗನ್ ಮತ್ತಿತರರಿದ್ದರು.