ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಹಾಲು ಉತ್ಪಾದಕರ ಸಹಕಾರ ಸಂಘದ ಪ್ರತಿಯೊಬ್ಬ ಸದಸ್ಯರೂ ಸಹ ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂದು ಮನ್ಮುಲ್ ನಿರ್ದೇಶಕ ಎಂ.ಬಿ ಹರೀಶ್ ಹೇಳಿದರು.
ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಹೇಮಗಿರಿ ನಾಟನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಸು ವಿಮಾ ಯೋಜನೆ ಹಲವು ವರ್ಷ ಗಳಿಂದ ಚಾಲನೆಯಲ್ಲಿದೆ ಆದರೂ ಸಹ ಹಲವಾರು ಮಂದಿ ರೈತರು ವಿಮಾ ಯೋಜನೆ ವ್ಯಾಪ್ತಿಗೆ ಒಳಪಡುತ್ತಿಲ್ಲ. ಹಾಗಾಗಿ ಜಾಗೃತಿ ಮೂಡಿಸುವ ಸಲುವಾಗಿ ದಿನಗಳ ಕಾಲ ಪ್ರತಿ ಗ್ರಾಮದಲ್ಲೂ ವಿಮೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗು ವುದು. ಒಕ್ಕೂಟವು ಕೋಟಿ ಕೋಟಿ ರೂಗಳನ್ನು ವಿಮೆಗಾಗಿ ಮೀಸಲಿಟ್ಟಿದೆ. ರೈತರು ಶೇ.50ರಷ್ಟು ವಿಮಾ ಹಣ ಪಾವತಿಸಿದರೆ ಉಳಿದ ವಿಮಾ ಹಣವನ್ನು ಒಕ್ಕೂಟವು ಭರಿಸಲಿದೆ ಎಂದು ತಿಳಿಸಿದರು.
ವಿಮೆಗೊಳಪಟ್ಟ ರಾಸುಗಳು ಯಾವುದೇ ರೀತಿ ತೊಂದರೆಗೊಳಗಾದರೆ ವಿಮೆಯಿಂದಾಗಿ ರೈತರ ಬದುಕು ಸಮಸ್ಯೆಯಿಲ್ಲದೆ ಸಾಗುತ್ತದೆ. ಇಲ್ಲವಾದಲ್ಲಿ ಸಂಕಷ್ಟಕ್ಕೆ ಒಳಗಾಗುವರು ಎಂದ ಅವರು ಪ್ರತಿಯೊಬ್ಬ ರೈತರು ರಾಸು ವಿಮೆಯನ್ನು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದರು.
ಮನ್ಮಲ್ ಹ್ಯಾಟ್ರಿಕ್ ನಿರ್ದೇಶಕ ಡಾಲು ರವಿ ಮಾತನಾಡಿ ಹೈನುಗಾರಿಕೆಯಲ್ಲಿ ಜನರು ತೊಡಗಿಸಿಕೊಂಡು ಗುಣಮಟ್ಟದ ಹಾಲನ್ನು ಉತ್ಪಾದಿಸಿ ಆರ್ಥಿಕವಾಗಿ ಸಬಲರಾಗಬೇಕು ಎಂದರು. ನಾಟನಹಳ್ಳಿ ಯುವಕ ಮಿತ್ರರು ಪರ್ಯಾಯ ಉದ್ಯೋಗಗಳು ದೊರೆಯು ವುದಿಲ್ಲ. ಕೃಷಿ ಹಾಗೂ ಹೈನುಗಾರಿಕೆ ಜನರ ಜೀವನಾಡಿಯಾಗಿದೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿಯಾಗಬೇಕು ಎಂದರು.
ಇದೇ ಸಮಯದಲ್ಲಿ ಸಂಘಕ್ಕೆ ಕಳೆದ ಸಾಲಿನಲ್ಲಿ ಹೆಚ್ಚು ಹಾಲು ಸರಬರಾಜು ಮಾಡಿದ ಹಾಲು ಉತ್ಪಾದಕರಿಗೆ ಸನ್ಮಾನಿಸಿ ಬಹುಮಾನ ನೀಡಿ ಹಾಗೂ ಎಸ್ ಎಸ್ ಎಲ್ ಸಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.
ಸಂಘದ ಅಧ್ಯಕ್ಷ ಸತೀಶ್ ಕುಮಾರ್, ಉಪಾಧ್ಯಕ್ಷ ಮಂಜುನಾಯ್ಕ, ಬಿರುವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಟನಹಳ್ಳಿ ಅನಿಲ್ ಕುಮಾರ್, ಮಾರ್ಗ ವಿಸ್ತರಣಾಧಿಕಾರಿ ಬಿ.ಸಿ ಮಧು,ಗ್ರಾ.ಪಂ ಸದಸ್ಯ ಎಂ.ಕೆ ಶಂಕರ,ಮಾಜಿ ಉಪಾಧ್ಯಕ್ಷೆ ಶಾರದಮ್ಮ ಮಂಜುನಾಯ್ಕ, ಸಂಘದ ನಿರ್ದೇಶಕರಾದ ಸತ್ಯ ನಿಂಗೇಗೌಡ,ವಿಜಯ್ ಕುಮಾರ್, ನಾಗರಾಜು,ಕುಮಾರ, ಸತೀಶ, ಧರ್ಮೇಗೌಡ,ಕುಬೇರ,ದೇವರಾಜು, ಸುಕನ್ಯಾ ಮಹೇಶ್,ನಾಗರತ್ನ ಕುಮಾರ್, ಸಂಘದ ಕಾರ್ಯದರ್ಶಿ ಶಿವಕುಮಾರ್, ಹಾಲು ಪರೀಕ್ಷಕ ಶ್ರೀಧರ್,ಸಹಾಯ ರಂಗೇಗೌಡ, ಹಿರಿಯ ಮುಖಂಡ ನಾಟನಹಳ್ಳಿ ಗಂಗಾಧರ್, ಯುವ ಮುಖಂಡ ಪವನ್ ಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ