ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಪ್ರಶಸ್ತಿ ಪುರಸ್ಕಾರಗಳು ಬಂದಾಗ ಸಂಘ ಸಂಸ್ಥೆಗಳು ಅಭಿನಂದಿಸುವುದು ಸತ್ಸಂಪ್ರದಾಯ. ಅಂತ ಸತ್ಸಂಪ್ರದಾಯ ದಿಂದ ಎಸ್ ಡಿ ಎಂ ಸಿ ಅಭಿನಂದಿಸುವಾಗ ಪ್ರಶಸ್ತಿ ಪಡೆದಾಗ ಪಡುವ ಖುಷಿಗಿಂತಲೂ ಹೆಚ್ಚಿನ ಖುಷಿ ಯಾಗುತ್ತದೆ ಎಂದು ಯರೇಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
ಅವರು ಸೋಮವಾರ ತಾಲ್ಲೂಕಿನ ಯರೇಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ ಭಾರತೀಯ ಶಿಕ್ಷಕರತ್ನ ರಾಷ್ಟ್ರ ಪ್ರಶಸ್ತಿ ಹಾಗೂ ಅಕ್ಷರ ಮಾತಾ ರಾಜ್ಯ ಪ್ರಶಸ್ತಿ ಪಡೆದ ಶಾಲೆಯ ಮುಖ್ಯ ಗುರುಗಳಿಗೆ ಹಾಗೂ ಸಹ ಶಿಕ್ಷಕಿಗೆ ಅಭಿನಂದಿಸುವ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಸನ್ಮಾನಗಳು ಹೆಚ್ಚಿನ ಜವಾಬ್ದಾರಿ ಯಿಂದ ಕೆಲಸ ಮಾಡಲು ಪ್ರೇರಣೆಯೂ ಸಿಗುತ್ತದೆ.ಸಾಧಕರನ್ನು ಗುರುತಿಸು ವುದು ಒಂದೆಡೆ ಯಾದರೆ ಅದನ್ನು ಕಂಡು ಅಭಿನಂದಿಸುವುದು ಮತ್ತೊಂದೆಡೆ ಇಮ್ಮಡಿ ಜವಾಬ್ದಾರಿ ನೀಡುತ್ತವೆ. ಹಾಗಾಗಿ ಇನ್ನಷ್ಟು ಹುಮ್ಮಸ್ಸಿಂದ ಕೆಲಸ ಮಾಡುತ್ತೇವೆ ಎಂದರು.
ಶಿಕ್ಷಕಿ ಸುಮಾ ಮಾತನಾಡಿ ಸನ್ಮಾನ ದಿಂದ ಸ್ಫೂರ್ತಿ ಸಿಕ್ಕಿದ್ದು ಅತ್ಯಂತ ಆಸಕ್ತಿಯಿಂದ ಮಕ್ಕಳ ಏಳಿಗೆಗೆ ದುಡಿಯುತ್ತೇನೆ ಎಂದರು.
ಅಭಿನಂದನಾ ಸಮಾರಂಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಯರೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಮಾತನಾಡಿ, ಶಾಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಮಕ್ಕಳ ದಾಖಲಾತಿ ಆಗಿದ್ದು,ಕಾನ್ವೆಂಟ್ ಗಳಿಂದಲೂ ಅನೇಕ ಮಕ್ಕಳು ದಾಖಲಾಗಿದ್ದಾರೆ. ಗ್ರಾಮೀಣ ಭಾಗ ದಲ್ಲಿ ಉತ್ತಮ ಹೆಸರು ಮಾಡಿದ ಶಾಲೆ ಯರೇಹಳ್ಳಿಯಾಗಿದ್ದು, ಅದಕ್ಕೆ ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ ಹಾಗೂ ಶಿಕ್ಷಕರು ಕಾರಣರಾಗಿದ್ದು ಪ್ರಶಸ್ತಿ ಯೋಗ್ಯರಿಗೆ ಬಂದಿದೆ ಎಂದರು.
ಯರೇಹಳ್ಳಿ ಪಂಚಾಯತ್ ಪಿ ಡಿ ಓ
ರಾಷ್ಟ್ರ ಮತ್ತು ರಾಜ್ಯ ಪುರಸ್ಕಾರ ದಕ್ಕಿದ್ದು ಸನ್ಮಾನಿತರಿಗೆ ಮನಸಾರೆ ಅಭಿನಂದಿಸುತ್ತೇವೆ ಎಂದರು.
ಸಮಾರಂಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಲೋಕೇಶ್, ನಿಕಟ ಪೂರ್ವ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ರಾದ ಶೋಭಾ, ಸದಸ್ಯರಾದ ಬಸವರಾಜ್, ರೂಪ, ವರ್ಣ, ಸರೋಜಮ್ಮ, ರಂಜಿತಾ, ಆಶಾ, ಅರಿವು ಕೇಂದ್ರದ ಮಾಲಾ, ಅಂಗನ ವಾಡಿ ಕಾರ್ಯ ಕರ್ತೆ ಪುಟ್ಟಕ್ಕ ಹಾಗೂ ಪೋಷಕರು ಉಪಸ್ಥಿತರಿದ್ದರು.
ವಾಣಿಶ್ರೀ ಸ್ವಾಗತಿಸಿದರೆ, ಜ್ಯೋತಿ ವಂದಿಸಿದರು.