ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ : ಅಮೆರಿಕಾದ ಬೋಸ್ಟನ್ ನಲ್ಲಿ ಆಗಸ್ಟ್ 4 ರಿಂದ 6 ರವರೆಗೆ ನ್ಯಾಷನಲ್ ಕಾನಫೆರೆನ್ಸ್ ಆಫ್ ಸ್ಟೇಟ್ ಲೆಜಿಸ್ಲೇಟರ್ಸ್ ವತಿಯಿಂದ ನಡೆಯಲಿರುವ ಅಂತರ ರಾಷ್ಟ್ರೀಯ ಶಾಸಕ ಸಮ್ಮೇಳನದಲ್ಲಿ ಭಾಗವಹಿಸಲು ವಿಧಾನಪರಿಷತ್ ಸದಸ್ಯರಾದ ಡಾ.ಮಂಜುನಾಥ್ ಭಂಡಾರಿ ಹಾಗೂ ಬಲ್ಕೀಶ್ ಬಾನು ಸೇರಿದಂತೆ ಕರ್ನಾಟಕದ ಹಲವು ಶಾಸಕರುಗಳು ಭಾಗವಹಿಸಲು ಮಂಗಳವಾರ ಅಮೆರಿಕಕ್ಕೆ ತೆರಳಿದ್ದಾರೆ.
ಶೃಂಗಸಭೆಯಲ್ಲಿ ಪ್ರಜಾತಂತ್ರ ವ್ಯವಸ್ಥೆ ಯನ್ನು ಗಟ್ಟಿಗೊಳಿಸುವಿಕೆ ಶಾಸನ ಸಬೆಗಳ ಪಕ್ಷಾತೀತ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ವಿಚಾರ ಸಂಕೀರ್ಣ ಸಂವಾದಗಳು ನಡೆಯ ಲಿದೆ. ಈ ಸಮಾವೇಶದಲ್ಲಿ ಕರ್ನಾಟಕದ ಎರಡು ಸದನಗಳ ಸಭಾಪತಿಗಳು, ಉಪ ಸಭಾಪತಿಗಳು, 20ಕ್ಕೂ ಅಧಿಕ ಶಾಸಕರು ಗಳು ಭಾಗವಹಿಸುತ್ತಿದ್ದಾರೆ.