ಭದ್ರಾವತಿ-ವಿವಿದೆಡೆ 79 ನೇ ಸಂಭ್ರಮದ ಸ್ವಾತಂತ್ರೋತ್ಸವ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ಹೊಸಸಿದ್ದಾ ಪುರದ ಸುರಕ್ಷಾ ಜೀವನ ವ್ರದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ 97 ಆರ್ ಎ ಎಫ್ RAF ತಂಡದ ಇನ್ಸ್ ಪೆಕ್ಟರ್ ಮನೋಹರ್ ನೇತೃದ ತಂಡ ಭೇಟಿ ನೀಡಿ ವೃದ್ಧರೊಂದಿಗೆ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ದಿಂದ ಆಚರಿಸಲಾಯಿತು.

ಯರೇಹಳ್ಳಿ ಸರ್ಕಾರಿ ಶಾಲೆಯಲ್ಲಿ: 
ತಾಲ್ಲೂಕಿನ ಯರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ದಲ್ಲಿ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಮಾತನಾಡಿ,ಸ್ವತಂತ್ರ ಸಿಕ್ಕಿದ್ದಲ್ಲ, ಗಳಿಸಿದ್ದು ಸಾವಿರಾರು ಸ್ವತಂತ್ರ ಹೋರಾಟಗಾರರ ಹೋರಾಟದ ಫಲವಾಗಿ ಗಾಂಧೀಜಿ ಯವರ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಚಳುವಳಿ ಗಳಿಗೆ ಬೆದರಿದ ಬ್ರಿಟಿಷರು ಭಾರತ ಬಿಟ್ಟು ತೊಲಗಿದ್ದನ್ನ ಮರೆಯಬಾರದು. ಜೀವನ ಪೂರಾ ತುಂಡುಡುಗೆಯಲ್ಲೇ ಇದ್ದ ಸರಳ ಗಾಂಧೀಜಿ ಗೆ ಅವರ ತತ್ವ ಆದರ್ಶ ಗಳಿಗೆ ವ್ಯತಿರಿಕ್ತವಾಗಿ ಮಾತಾಡುವ ಅವರನ್ನ ಅವಹೇಳನ ಮಾಡಿ ಮಾತಾಡುವ ಸಂಸ್ಕೃತಿ ಬೆಳೆಯುತ್ತಿದೆ ಎಂದರು.ಎಸ್ ಡಿ ಎಂ ಸಿ ಅಧ್ಯಕ್ಷ ಲೋಕೇಶ್ ಧ್ವಜಾರೋಹಣ ನೆರವೇರಿಸಿದರು.

ಚುಂಚಾದಿ ಮಹಿಳಾ ವೇದಿಕೆಯಿಂದ : 
ಚುಂಚಾದ್ರಿ ಮಹಿಳಾ ವೇದಿಕೆಯಿಂದ ಜನ್ನಾಪುರದ ಧನ್ವಂತರಿ ಉದ್ಯಾನವನ ದಲ್ಲಿ 79ನೇ ಸ್ವತಂತ್ರ ದಿನಾಚರಣೆ ಯನ್ನು ಆಚರಿಸಲಾಯಿತು. ವೇದಿಕೆಯ ಅಧ್ಯಕ್ಷೆ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ಧನ್ವಂತರಿ ಟ್ರಸ್ಟ್ ನ ಎಲ್ಲ ಪದಾಧಿಕಾರಿಗಳು ಹಾಗೂ ಚಂಚಾದ್ರಿ ಮಹಿಳಾ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿ ಇ ಎಸ್ ವಿದ್ಯಾಸಂಸ್ಥೆಯಲ್ಲಿ:
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಯಲ್ಲಿ ಸಂಸ್ಥೆಯ ಅಧ್ಯಕ್ಷರ ಸಿದ್ದಬಸಪ್ಪ. ಬಿ. ದ್ವಜಾರೋಹಣ ನೆರೆವೇರಿಸಿದರು. ಆಡಳಿತಅಧಿಕಾರಿ ಡಾ. ಎಸ್. ಪಿ. ರಾಕೇಶ್. ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಎಲ್ಲಾ ವಿಭಾಗದ ಮುಖ್ಯಸ್ಥರುಗಳು ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು