ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಹೊಸಸಿದ್ದಾ ಪುರದ ಸುರಕ್ಷಾ ಜೀವನ ವ್ರದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ 97 ಆರ್ ಎ ಎಫ್ RAF ತಂಡದ ಇನ್ಸ್ ಪೆಕ್ಟರ್ ಮನೋಹರ್ ನೇತೃದ ತಂಡ ಭೇಟಿ ನೀಡಿ ವೃದ್ಧರೊಂದಿಗೆ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ದಿಂದ ಆಚರಿಸಲಾಯಿತು.
ವ್ರದ್ಧಾಶ್ರಮದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಮಾತನಾಡಿ, ಇಂದಿನ ದಿನಗಳಲ್ಲಿ ಪೊಲೀಸ್, ಮಿಲ್ಟ್ರಿ ಅಂದರೆ ಭಯ ಪಡುವ ಜನರೇ ಹೆಚ್ಚು. ಅಂತಹುದರಲ್ಲಿ ಅವರುಗಳೇ ಆಶ್ರಮಕ್ಕೆ ಆಗಮಿಸಿ ವೃದ್ಧರಿಗೆ ಧೈರ್ಯ ತುಂಬಿ ಸಿಹಿ ಹಂಚಿ ಸಂಭ್ರಮ ಮಾಡಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಆರ್ ಎ ಎಫ್ ಪಡೆಯ ಅಧಿಕಾರಿಗಳು, ಆಶ್ರಮದ ಪದಾಧಿಕಾರಿಗಳು ಹಾಗೂ ವೃದ್ಧರು ಇದ್ದರು.