ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರಸಭಾ ನೂತನ ಪೌರಾ ಯುಕ್ತರಾಗಿ ಅಧಿಕಾರ ಸ್ವೀಕರಿ ಸಿದ ಕೆ ಎನ್.ಹೇಮಂತ್ ರವರಿಗೆ ಶ್ರೀ ಡಿ.ದೇವರಾಜ ಅರಸು ಜನ ಸ್ಪಂದನ ಸೇವಾ ಟ್ರಸ್ಟ್ ಛೆರ್ಮನ್ ಹಾಗೂ ನಗರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್.ವೇಣು ಗೋಪಾಲ್ ನೇತೃತ್ವದಲ್ಲಿ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಡಿ.ದೇವರಾಜ ಅರಸು ಜನ ಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಕ್ಷೇತ್ರದ ಸರ್ವ ತೋಮುಖ ಅಭಿವೃದ್ಧಿ ಗಾಗಿ ಹೋರಾಟವನ್ನು ಹಮ್ಮಿಕೊಳ್ಳ ಲಾಗಿದ್ದು,2027 ರ ಜನವರಿ ತಿಂಗಳಲ್ಲಿ 50 ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದೆ. ಈ ಹಿನ್ನಲೆಯಲ್ಲಿ
ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ತಮ್ಮ ಅಧಿಕಾರ ಅವಧಿಯಲ್ಲಿ ನಗರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ, ನಗರಸಭೆ ಆಡಳಿತ ಮಂಡಳಿ ಯವರ ಸಹಕಾರ ದಿಂದ ಮಾದರಿ ನಗರ ವನ್ನಾಗಿಸಲು ಮುಂದಾಗು ವಂತೆ ಕೋರಿದರು.
ಪ್ರಾಥಮಿಕ ಹಂತವಾಗಿ ನಗರಸಭಾ ವ್ಯಾಪ್ತಿಯ ನ್ಯೂಟೌನ್ ಶಾಖಾ ಕಛೇರಿ ಆವರಣದಲ್ಲಿ ಮೆಸ್ಕಾಂ, ಆಧಾರ್ ಕೌಂಟರ್, ಅಂಚೆಕಚೇರಿ ಕಾರ್ಯ ರಂಭ ಮಾಡಲು ಸ್ಥಳಾವಕಾಶ ಮಾಡಿಕೊಡಲು ತಾವುಗಳು ಒಮ್ಮೆ ನಗರಸಭಾ ನ್ಯೂಟೌನ್ ಶಾಖಾ ಕಛೇರಿ ಆವರಣಕ್ಕೆ ಭೇಟಿ ನೀಡುವುದು,
ನಗರಸಭೆ ವತಿಯಿಂದ ಹಸಿಕಸ-ಒಣಕಸ ಸಂಗ್ರಹಣ ಮಾಡುವ ಸಂಬಂಧ ಮನೆ ಮನೆಗಳಿಗೆ ಸಮರ್ಪಕವಾಗಿ ಕಸದ ಡಬ್ಬಿ ಗಳನ್ನು ವಿತರಣೆ ಮಾಡದೇ ಇರುವುದರಿಂದ ಸೂಕ್ತವಾಗಿ ಪರಿಶೀಲಿಸಿ ಕಸದ ಡಬ್ಬಿಗಳನ್ನು ವಿತರಣೆ ಮಾಡದೇ ಇರುವ ಮನೆಗಳಿಗೆ ಕಸದ ಡಬ್ಬಿಗಳನ್ನು ವಿತರಿಸುವ ಬಗ್ಗೆ ಆಗತ್ಯ ಕ್ರಮ ತೆಗೆದುಕೊಳ್ಳುವುದು ಸೇರಿದಂತೆ ಹಲವು ಸಾರ್ವಜನಿಕ ಸಮಸ್ಯೆಗಳ ಕುರಿತು ಮನವಿ ಪತ್ರದಲ್ಲಿ ಕೋರಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಿ. ಕದಿರೇಶ್, ಮಾಜಿ ಸದಸ್ಯ ಶಶಿಧರ್ ಗೌಡ, ಎಂ ವಿ ಚಂದ್ರಶೇಖರ, ಬಿ.ವಿ. ಗಿರಿ ಮತ್ತಿತರರಿದ್ದರು.