ಭದ್ರಾವತಿ-ಗ್ರಂಥಾಲಯಗಳ ಬೆಳವಣಿಗೆಗೆ ಗ್ರಂಥಪಾಲಕರ ಜವಾಬ್ದಾರಿ ದೊಡ್ದದು

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಗ್ರಂಥಾಲಯಗಳು ಬೆಳವಣಿಗೆಗೆ ಗ್ರಂಥಪಾಲಕರ ಜವಾಬ್ದಾರಿ ದೊಡ್ದದು. ಮಾದರಿ ಗ್ರಂಥಾಲಯಗಳಲ್ಲಿ ಮಾದರಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸ ಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಗಂಗಣ್ಣ ತಿಳಿಸಿದರು.

ಗ್ರಂಥಪಾಲಕ ಸ್ನೇಹಿತ, ತತ್ವಜ್ಞಾನಿ ಎಸ್.ಆರ್.ರಂಗನಾಥನ್ ಅವರ ಜನ್ಮ ದಿನಾಚರಣೆ ಅಂಗವಾಗಿ ಮಂಗಳ ವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಯರೇಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಾದ ಕೆ.ಎಸ್. ಮಾಲಾ ಮಾತನಾಡಿ ಎಸ್.ಆರ್. ರಂಗನಾಥನ್ ರವರು ಮೊಟ್ಟಮೊದಲ ಗ್ರಂಥಪಾಲಕರಾಗಿ ಗ್ರಂಥಾಲಯಗಳಿಗೆ ಪಂಚ ಸೂತ್ರ ಗಳನ್ನು ರೂಪಿಸುವುದರ ಜೊತೆಗೆ ವರ್ಗೀಕರಣ ಮತ್ತು ಸೂಚೀಕರಣ ಗಳನ್ನು ಗ್ರಂಥಾಲಯಗಳಿಗೆ ಅಳವಡಿಸುವಲ್ಲಿವರ ಪಾತ್ರ ಅಪಾರ ವಾದುದು ಎಂದು ರಂಗನಾಥನ್ ರವರ ಬಗ್ಗೆ ಕಿರುಪರಿಚಯ ಮಾಡಿಕೊಟ್ಟರು.

ಸುರೇಶ್ ಸ್ವಾಗತಿಸಿದರೆ, ಮಹೇಶ್ವರ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು