ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ವಿಐಎಸ್‌ಎಲ್ ವತಿ ಯಿಂದ ಸಹ್ಯಾದ್ರಿ ನಾರಾಯಣ ಆಸ್ಪತ್ರೆ,ಶಂಕರ ಕಣ್ಣಿನ ಆಸ್ಪತ್ರೆ, ಭದ್ರಾವತಿ ಸರ್ಕಾರಿ ಆಸ್ಪತ್ರೆ ಹಾಗೂ ಶ್ರೀ ರಾಮ ಸೇವಾ ಟ್ರಸ್ಟ್ ಸಹಯೋಗ ದೊಂದಿಗೆ ತಾಲ್ಲೂಕಿನ ತಾರೀಕಟ್ಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆ.17ರ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ವಿಐಎಸ್‌ಎಲ್ ವತಿಯಿಂದ ಉಚಿತವಾಗಿ ಔಷಧ ವಿತರಿಸಲಾಗು ವುದು. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದು ಕೊಳ್ಳುವಂತೆ ಕೋರಲಾಗಿದೆ.