ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹರಿಬಿಡುವ ಕೆಲಸ ಖಂಡನೀಯ ವಾಗಿದೆ. ಉದ್ದೇಶ ಪೂರಕವಾಗಿ ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಹುನ್ನಾರವಾಗಿದೆ ಹಾಗಾಗಿ ಶ್ರೀ ಧರ್ಮಸ್ಥಳ ಸದ್ಭಕ್ತರು ಒಗ್ಗಟ್ಟಿ ನಿಂದ ಹೋರಾಟ ಅನಿವಾರ್ಯ ಎಂದು ತೆಂಡೆಕೆರೆ ಬಾಳೆಹೊನ್ನೂರು ಶಾಖಾ ಮಠದ ಪೀಠಧ್ಯಕ್ಷರಾದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಜಯನಗರ ಬಡಾವಣೆ ಯಲ್ಲಿ ರುವ ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ತಾಲೂಕು ಶ್ರೀ ಧರ್ಮಸ್ಥಳ ಭಕ್ತ ಮಂಡಳಿ ವತಿಯಿಂದ ಶ್ರೀ ಧರ್ಮಸ್ಥಳ ದ ಅಪಪ್ರಚಾರದ ವಿರುದ್ಧ ಜಾಗೃತಿ ಹಾಗೂ ಕೆ.ಆರ್.ಪೇಟೆ ತಾಲ್ಲೂಕಿ ನಲ್ಲಿ ಬೃಹತ್ ಪ್ರತಿಭಟನೆ ಬಗ್ಗೆ ಪೂರ್ವ ಭಾವಿ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಸಾವಿರ ವರ್ಷ ಗಳ ಇತಿಹಾಸ ಹೊಂದಿದೆ. ನಿರಂತರ ಅನ್ನ,ಅಕ್ಷರ ದಾಸೋಹ,ಔಷಧ ದಾನ ನಡೆಸುತ್ತಾ ಬಂದಿದೆ. ಜತೆಗೆ ಸ್ವ-ಸಹಾಯ ಗುಂಪುಗಳ ಮೂಲಕ ಅನೇಕ ಮಹಿಳೆಯರಿಗೆ ದಾರಿ ದೀಪದ ಜೊತೆಗೆ ಹಿಂದುಗಳ ಪ್ರಮುಖ ದೇವಾಲಯ.ಶ್ರೀ ಧರ್ಮಸ್ಥಳ ಧರ್ಮಾಧಿಕಾರಿಗಳ ಸಮಾಜಮುಖಿ ಹಾಗೂ ಶಿಕ್ಷಣ ಮುಖಿ ಕಾರ್ಯಗಳನ್ನು ಕಂಡು ಸಹಿಸದ ಕೆಲ ಸಮಾಜ ಘಾತುಕ ಶಕ್ತಿಗಳು ಧರ್ಮಸ್ಥಳದ ಹೆಸರಿಗೆ ಕಳಂಕ ತರಬೇಕು ಎಂಬ ಯೋಜನೆ ಯಲ್ಲಿ ತೊಡಗಿವೆ. ಧರ್ಮಸ್ಥಳ ಕ್ಷೇತ್ರವು ಇಲ್ಲಿಯವರೆಗೆ ಮಾಡುತ್ತಾ ಬಂದಿರುವ ಕಾರ್ಯಗಳು ಶ್ಲಾಘನೀಯ.ನಾವು ದುಷ್ಟ ಶಕ್ತಿಗಳ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ ಎಂದರು ಆದರೆ ಕೆಲ ದುಷ್ಕರ್ಮಿಗಳು ಹಾದಿ ಬೀದಿಗಳಲ್ಲಿ ನ್ಯಾಯ ಕೇಳುವುದು, ವಾಕ್ ಸ್ವಾತಂತ್ರ್ಯವಿದೆ ಎಂದು ಯಾರದೋ ಮಾನಹಾನಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು ಧರ್ಮಸ್ಥಳ ಧರ್ಮಾಧಿಕಾರಿಗಳಿಗೆ ಎಲ್ಲರೂ ನೈತಿಕ ಬೆಂಬಲ ನೀಡೋಣ ಎಂದರು.
ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಚನ್ನವೀರ ಮಹಾಸ್ವಾಮಿ ಮಾತನಾಡಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯವು ನಾಡಿನ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಹಾಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯವರು ಸಾಮಾಜಿಕ ಮತ್ತು ಧಾರ್ಮಿಕ ಕೆಲಸಗಳ ಉಳಿವಿಗಾಗಿ ದುಡಿಯುತ್ತಿ ದ್ದಾರೆ. ನಿತ್ಯ ದೇಗುಲಕ್ಕೆ ಆಗಮಿಸುವ ಒಂದು ಲಕ್ಷ ಜನರಿಗೆ ಅನ್ನದಾಸೋಹ ಮಾಡುತ್ತಿದ್ದಾರೆ. ಯಾವುದೇ ಮತ, ಭೇದವಿಲ್ಲದೆ ಎಲ್ಲರನ್ನೂ ಸಮಾನರಾಗಿ ಕಾಣುತ್ತಿದ್ದಾರೆ. ಆದರೆ, ಇದರ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡಲಾಗು ತ್ತಿದ್ದು, ಇದು ಖಂಡನಾರ್ಹ ಎಂದರು. ಸದ್ಯ ನಡೆಯುತ್ತಿರುವ ಎಸ್‌ಐಟಿ ತನಿಖೆಯನ್ನು ನಿಗದಿತ ಅವಧಿಯೊಳಗೆ ಮುಗಿಸಿ, ಎಲ್ಲ ರೀತಿಯ ಗೊಂದಲ ಗಳಿಗೆ ತೆರೆ ಎಳೆಯಬೇಕು. ಸಾಮಾಜಿಕ ಮಾಧ್ಯಮ ಗಳಲ್ಲಿ ನಡೆಯುತ್ತಿರುವ ಅಪಪ್ರಚಾರ ತಡೆಯಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಆ: 20ನೇ ತಾರೀಕು ಕೆ.ಆರ್.ಪೇಟೆ ತಾಲ್ಲೂಕು ಶ್ರೀ ಧರ್ಮಸ್ಥಳ ಭಕ್ತ ಮಂಡಳಿಯಿಂದ ಶ್ರೀ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಗಳ ಕುಟುಂಬದವರ ಬಗ್ಗೆ ಅಪ ಪ್ರಚಾರ ಮಾಡುತ್ತಿರುವವರ ವಿರುದ್ಧ ಕೆ.ಆರ್.ಪೇಟೆ ಪಟ್ಟಣದ ಟಿ.ಬಿ ವೃತ್ತದಲ್ಲಿ ಪ್ರತಿಭಟಿಸಿ, ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಬಳಿಕ ಜಿ.ಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಷ್,ಮುಖಂಡ ಅಕ್ಕಿಹೆಬ್ಬಾಳು ರಘು,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ತಾಲ್ಲೂಕು ಅಧ್ಯಕ್ಷ ಸುಜೇಂದ್ರ ಕುಮಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ, ಕಸಾಪ ಮಾಜಿ ಅಧ್ಯಕ್ಷ ಹರಿಚರಣ ತಿಲಕ್, ಜೆಡಿಎಸ್ ಮುಖಂಡ ಬ್ಯಾಲದಕೆರೆ ನಂಜೇಗೌಡ, ಅರವಿಂದ್ ಕಾರಂತ್, ತೋಟಪ್ಪ ಶೆಟ್ಟಿ,ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಶ್ರೀ ಧರ್ಮಸ್ಥಳ ಸದ್ಭಕ್ತರು ಇದ್ದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
Tags
ಕೆ ಆರ್ ಪೇಟೆ ವರದಿ