ಡಿಸಿಸಿ ಉತ್ತಮ ಬ್ಯಾಂಕ್ ಪ್ರಶಸ್ತಿ:ಜಿಲ್ಲೆಯ ಗ್ರಾಹಕರಿಗೆ ಅರ್ಪಣೆ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಂದ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗೆ ಲಭಿಸಿರುವ ಉತ್ತಮ ಬ್ಯಾಂಕ್ ಪ್ರಶಸ್ತಿಯನ್ನು ನಮ್ಮ ಜಿಲ್ಲೆಯ ರೈತರಿಗೆ,ಗ್ರಾಹಕರಿಗೆ ಅರ್ಪಿಸಿಸುವು ದಾಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡ ತಿಳಿಸಿದ್ದಾರೆ.

ಅವರು ಬೆಂಗಳೂರಿನಲ್ಲಿ ಬ್ಯಾಂಕಿನ ಪರವಾಗಿ ಪ್ರಶಸ್ತಿ ಸ್ವೀಕರಿಸಿ ಮಾಧ್ಯಮ ಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದರು. 

ಸತತವಾಗಿ ಕಳೆದ ಎರಡು ವರ್ಷ ಗಳಿಂದ ಉತ್ತಮ ಬ್ಯಾಂಕ್ ಪ್ರಶಸ್ತಿ ಯನ್ನು ಪಡೆಯುತ್ತ ಬರುತ್ತಿದೆ. ಬ್ಯಾಂಕ್ ಸರ್ವಾಂಗೀಣ ನಿರ್ವಹಣೆಗಾಗಿ ಈ ಪ್ರಶಸ್ತಿ ನಮ್ಮ ಬ್ಯಾಂಕಿಗೆ ಸಂದಿರುವುದು ಸಂತಸ ತಂದಿದೆ. 

ನಮ್ಮ ಆಡಳಿತ ಮಂಡಳಿ, ದಕ್ಷತೆ ಯಿಂದ ಸೇವೆ ಸಲ್ಲಿಸಿದ ಬ್ಯಾಂಕಿನ ಸಿಬ್ಬಂದಿಗಳಿಗೆ, ಪ್ರಾಥಮಿಕ ಕೃಷಿ ಪತ್ತಿನ ವ್ಯವಸಾಯ ಸಹಕಾರ ಸಂಘಗಳು, ನಮ್ಮ ಬ್ಯಾಂಕಿನ ಸದಸ್ಯ ಸಹಕಾರಿ ಸಂಸ್ಥೆಗಳಿಗೆ ಈ ಸಂದರ್ಭದಲ್ಲಿ ಅಭಿನಂದನಗೆಳನ್ನು ಹಾಗೂ ಕೃತಜ್ಞತೆ ಗಳನ್ನು ಅರ್ಪಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಸಿ.ರಾಜಣ್ಣ ರೆಡ್ಡಿ ಮತ್ತಿತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು