ವಿದ್ಯಾರ್ಥಿಗಳಿಗೆ ಸಂವಿಧಾನ ರಚಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ರವರ ಕುರಿತ ಮಾಹಿತಿ ಕೊರತೆ: ಶೈಲಜಾ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಸಂವಿಧಾನ ರಚಿಸಿರುವ ಡಾ.ಬಿ ಆರ್.ಅಂಬೇಡ್ಕರ್ ರವರ ಕುರಿತ ಮಾಹಿತಿ ಕೊರತೆ ಇಂದಿನ ವಿದ್ಯಾರ್ಥಿಗಳಿಗೆ ಇದೆ. ಸ್ವಾತಂತ್ರ್ಯ ಚಳವಳಿ ಹೇಗಾಯಿತು, ಸ್ವಾತಂತ್ರ್ಯ ಚಳವಳಿಯ ಅಸ್ಮಿತೆ ಹಾಗೂ ಮಹಾತ್ಮ ಗಾಂಧೀಜಿಯವರ ಕುರಿತು ಪುನರಾವ ಲೋಕನ ಮಾಡುವುದು ಇಂದಿನ ವಿದ್ಯಾರ್ಥಿ ಗಳಿಗೆ ಅತ್ಯಂತ ಅವಶ್ಯಕ ವಾಗಿದೆ ಎಂದು ಸರ್ ಎಂ ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಶೈಲಜಾ ಹೊಸಳ್ಳೇರ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ ಎಂ ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಚಳವಳಿ, ಸಂವಿಧಾನ, ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ರವರ ವಿಚಾರವಾಗಿ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳ ಲಾಗಿದ್ದ ರಸಪ್ರಶ್ನೆ ಕಾರ್ಯಕ್ರಮ ದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಇಂತಹ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿ ಕೊಂಡಿರುವುದು ಸ್ತುತ್ಯಾರ್ಹಎಂದರು.

ನಗರಸಭಾ ಸದಸ್ಯರಾದ ಸರ್ವ ಮಂಗಳ ಬೈರಪ್ಪ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್ ನಲ್ಲಿ ಮುಳುಗಿ ಇತಿಹಾಸವನ್ನು ಅರಿಯದೆ ಸುಮ್ಮನೆ ಕಾಲ ಕಳೆಯುತ್ತಿರುತ್ತಾರೆ. ದೇಶಕ್ಕಾಗಿ ಹೋರಾಡಿದ ಮಹಾನ್ ನಾಯಕರು ಗಳನ್ನು ನೆನಪು ಮಾಡಿಕೊಳ್ಳಲು ಈ ರಸಪ್ರಶ್ನೆ ಕಾರ್ಯಕ್ರಮ ಅತ್ಯಂತ ಅವಶ್ಯಕವಾಗಿದೆ. ಇದು ವಿದ್ಯಾರ್ಥಿಗಳ ಜ್ಞಾನವನ್ನು ಅಧಿಕಗೊಳಿಸುತ್ತದೆ ಎಂದರು.
    
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ಎಂ.ಎಸ್. ಸುಧಾಮಣಿ ಮಾತನಾಡಿ ಗಾಂಧೀಜಿ ಯವರ ಅಹಿಂಸಾ ಸತ್ಯಾಗ್ರಹ, ರಕ್ತಪಾತವಿಲ್ಲದೆ ಭಾರತಕ್ಕೆ ಸ್ವಾತಂತ್ರ್ಯ ವನ್ನು ತಂದುಕೊಟ್ಟರು. ಮಹಾನ್ ಚಿಂತಕ ಡಾ: ಬಿ ಆರ್.ಅಂಬೇಡ್ಕರ್ ರವರು ಬೃಹತ್ ಸಂವಿಧಾನವನ್ನು ರಚಿಸಿ ನಮ್ಮಗಳಿಗೆ ಉಪಕಾರವನ್ನು ಮಾಡಿರುತ್ತಾರೆ. ಇಂತಹ ಮಹಾನ್ ವ್ಯಕ್ತಿಗಳ ಹಾಗೂ ಸ್ವಾತಂತ್ರ್ಯ ಚಳವಳಿ ಯಲ್ಲಿ ಹೋರಾಡಿದ ನಾಯಕರುಗಳ ನೆನಪುಗಳನ್ನು ಮೆಲುಕು ಹಾಕುತ್ತಿರು ವುದು ಒಳ್ಳೆಯ ಸಂಗತಿ ಎಂದರು.

ಕ ಸಾ ಪ ಅಧ್ಯಕ್ಷ ಹೆಚ್ ತಿಮ್ಮಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆ ಯನ್ನು ವೃದ್ಧಿಸಿಕೊಂಡು ಕಲಿಯುವ ಆಸಕ್ತಿಯನ್ನು ಮೂಡಿಸುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಮಹಾತ್ಮ ಗಾಂಧೀಜಿ, ಸ್ವಾತಂತ್ರ್ಯ ಹೋರಾಟ ಗಾರರ ಕುರಿತು, ನಮ್ಮ ದೇಶದ ಸಂವಿಧಾನದಲ್ಲಿ ಅಡಕವಾಗಿರುವ ವಿಷಯಗಳು ಹಾಗೂ ಸಂವಿಧಾನ ವನ್ನು ರಚನೆ ಮಾಡಿರುವ ಡಾ.ಬಿ ಆರ್ ಅಂಬೇಡ್ಕರ್ ರವರ ಜೀವನ ಕುರಿತು ಅರಿಯುವುದು ಮುಖ್ಯವಾಗಿದೆ. ಪುಸ್ತಕ ಗಳನ್ನು ಓದುತ್ತಾ ಹೋದಲ್ಲಿ ವ್ಯಕ್ತಿತ್ವ ವಿಕಾಸಕ್ಕೆ ಅನುಕೂಲವಾಗುತ್ತದೆ ಎಂದರು. 

ರಸಪ್ರಶ್ನೆಯಲ್ಲಿ ಪ್ರಥಮ ಪ್ರಶಸ್ತಿ ಬೊಮ್ಮನ ಕಟ್ಟೆ ಸರ್ ಎಂ ವಿ. ವಿಜ್ಞಾನ ಕಾಲೇಜು ತಂಡ, ದ್ವಿತೀಯ ಪ್ರಶಸ್ತಿ ಯನ್ನು ಸರ್ಕಾರಿ ಪದವಿ ಕಾಲೇಜು ಹೊಳೆಹೊನ್ನೂರು ಹಾಗೂ ತೃತೀಯ ಪ್ರಶಸ್ತಿಯನ್ನು ಸರ್ ಎಂ ವಿ ಕಲಾ ಮತ್ತು ವಾಣಿಜ್ಯ ಕಾಲೇಜು ತನ್ನದಾಗಿಸಿ ಕೊಂಡರು.

ಕಾರ್ಯಕ್ರಮದಲ್ಲಿ ಅಂಕ ತಜ್ಞರಾಗಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕುಮಾರ ನಾಯಕ್ ನಿರ್ವಹಿಸಿದರು.
      
ಮಾನಸ ಶಿಂಧೆ ಪ್ರಾರ್ಥಿಸಿ, ಎಂ ಈ ಜಗದೀಶ್, ಸ್ವಾಗತಿಸಿದರೆ, ನಾಗೋಜಿ ರಾವ್ ನಿರೂಪಿಸಿ, ಪ್ರೊ:ವರದರಾಜು ವಂದಿಸಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ದಿವಾಕರ್, ಭೈರಪ್ಪ , ಬಿ ಕಮಲಾಕರ್, ಬಿ ಎಸ್ ಪ್ರಕಾಶ್, ಬಿ ಹೆಚ್ ಪ್ರಕಾಶ್, ನಾಗೇಶ್ ಮತ್ತಿತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು