ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಸಸಿಗಳನ್ನು ನೆಡುವುದರ ಜತೆಯಲ್ಲಿ ಅವುಗಳ ಪಾಲನೆ, ಪೋಷಣೆಯು ಮುಖ್ಯ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಹೇಳಿದರು.
ಕೊಮ್ಮನಾಳು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಪರಿಸರ ಜಾಗೃತಿ ಹಾಗೂ ಸಸಿಗಳ ವಿತರಣಾ ಕಾರ್ಯಕ್ರಮ ದಲ್ಲಿ ಮಾತನಾಡಿ, ಪರಿಸರ ನಾಶದಿಂದ ಮನುಕುಲವೇ ದುಸ್ಥಿತಿಯಲ್ಲಿದೆ. ಆಧುನಿಕರಣದಿಂದ ಗಿಡಮರಗಳ ಕಡಿತಲೆ ಜಾಸ್ತಿಯಾಗಿದೆ. ಇದರ ಜತೆಗೆ ಪರಿಸರದಿಂದ ನಮಗೆ ಸಿಗುವ ಶುದ್ಧವಾದ ಆಮ್ಲಜನಕದ ಕೊರತೆ ಉಂಟಾಗಿ ಅನೇಕ ಕಾಯಿಲೆ ಗಳಿಗೆ ತುತ್ತಾಗುತ್ತಿದ್ದೇವೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಸುಮತಿ ಕುಮಾರ ಸ್ವಾಮಿ ಮಾತನಾಡಿ, ಪ್ರತಿಯೊಬ್ಬರೂ ವಿಶೇಷ ದಿನಗಳಂದು ಒಂದೊoದು ಸಸಿಗಳನ್ನು ನೆಡುವ ಪ್ರತಿಜ್ಞೆ ಮಾಡ ಬೇಕು. ಅದರ ಜೊತೆಗೆ ಸಸಿಗಳನ್ನು ಪೋಷಣೆ ಮಾಡಬೇಕು. ಇಂದು ನಾವು ನೆಟ್ಟ ಸಸಿ ಮುಂದಿನ ತಲೆಮಾರಿ ಗಾದರೂ ನೆರಳು ಹಾಗೂ ಫಲ ನೀಡುತ್ತದೆ. ಹಾಗೆ ವಾತಾವರಣವೂ ಕೂಡ ಶುದ್ಧವಾಗಿರುತ್ತದೆ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ನೆಪ್ಚೂನ್ ಕಿಶೋರ್ ಮಾತನಾಡಿ, ನಾವು ಅಧಿಕಾರ ವಹಿಸಿಕೊಂಡ ನಂತರ ಎಲ್ಲಾ ಬಡಾವಣೆಗಳಲ್ಲಿ ಹಾಗೂ ನಮ್ಮ ಇಂಟರಾಕ್ಟ್ ಕ್ಲಬ್ಬಿನ ಶಾಲೆಗಳ ಆವರಣಗಳಲ್ಲಿ ಮುಖ್ಯರಸ್ತೆ ಎಡ ಬಲಗಳಲ್ಲಿ ಸಸಿಗಳನ್ನು ನೀಡುತ್ತಾ ಬಂದಿದ್ದೇವೆ. ಇದು ನಮ್ಮ ಜಿಲ್ಲಾ ಯೋಜನೆಯ ಪ್ರಮುಖ ಕಾರ್ಯಕ್ರಮ ವಾಗಿದೆ ಎಂದು ತಿಳಿಸಿದರು.
ರೋಟರಿ ಪೂರ್ವ ಕಾರ್ಯದರ್ಶಿ ಡಾ. ಬಿ.ಆರ್.ಧನಂಜಯ ರಾಂಪುರ ಮಾತನಾಡಿ, ಶಿಕ್ಷಣದ ಜೊತೆಯಲ್ಲಿ ಮಕ್ಕಳಿಗೆ ಕ್ರೀಡೆ ಸಾಂಸ್ಕೃತಿಕ ಹಾಗೂ ಪರಿಸರ ಪ್ರೇಮವನ್ನು ಬೆಳೆಸಬೇಕು. ಅದರ ಮಹತ್ವವನ್ನು ತಿಳಿಸಿ ಕೊಡಬೇಕೇಂದರು.
ಮುಖ್ಯಶಿಕ್ಷಕ ಚಂದ್ರಪ್ಪ ಮಾತನಾಡಿ, ರೋಟರಿ ಸಂಸ್ಥೆಯ ಸೇವೆ ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮೇಲೆ ಇಟ್ಟ ಅಭಿಮಾನಕ್ಕೆ ನಾವು ಸದಾ ಚಿರಋಣಿ ಎಂದರು.
ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ನ ಗೈಡ್ಸ್ ತರಬೇತಿ ಆಯುಕ್ತರಾದ ಗೀತಾ ಚಿಕ್ಕಮಠ ಹಾಗೂ ಶಿಕ್ಷಕರು ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.
Tags
ಶಿವಮೊಗ್ಗ ವರದಿ