ಹುಬ್ಬಳ್ಳಿ: ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಳೆಯನ್ನು ಲೆಕ್ಕಿಸದೆ ಕಾರ್ಮಿಕರ ಧರಣಿ-ಮೂರನೇ ದಿನಕ್ಕೆ

ವಿಜಯ ಸಂಘರ್ಷ ನ್ಯೂಸ್ 
ಹುಬ್ಬಳ್ಳಿ: ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾ ಘಟಕದಿಂದ ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲೋನಿಯಲ್ಲಿರುವ ಕಾರ್ಮಿಕರ ಭವನದ ಎದುರು ಸೋಮವಾರ ದಿಂದ ಪ್ರಾರಂಭವಾಗಿ ಇಂದಿಗೆ ಮೂರನೇ ದಿನ ಪ್ರತಿಭಟನೆ ಮುಂದುವರೆದಿದೆ.

ರಾತ್ರಿ ಧಾರಾಕಾರ ಮಳೆಯಲ್ಲಿ ಪ್ರತಿಭಟನೆ ಮುಂದುವರಿಯುತ್ತಿದೆ. ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಆಯುಕ್ತ ಎನ್ ಶಶಿಕುಮಾರ್ ಆಗಮಿಸಿ ಮನವಲಿ ಸುವ ಪ್ರಯತ್ನ ಮಾಡಿದರು ಸಹ ಪ್ರತಿಭಟನಾ ಕಾರರು ಕಾರ್ಮಿಕರ ಸಚಿವರು ಬರೋವರೆಗೂ ಪ್ರತಿಭಟನೆ ಮುಂದುವರೆಯುತ್ತದೆ. ಮನವಿ ಸ್ವೀಕರಿಸಿದ ನಂತರ ಪ್ರತಿಭಟನೆ ಹಿಂಪಡೆಯುವುದಾಗಿ ತಿಳಿಸಿದರು. 

 ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರ ಮಾತನಾಡಿ, ಮಕ್ಕಳಿಗೆ ಕೂಡಲೇ ಶೈಕ್ಷಣಿಕ, ಇತರೆ ಧನ ಸಹಾಯ ಮಂಜೂರು ಮಾಡಬೇಕು. ಅನಾವಶ್ಯಕ ಟೆಂಡ‌ರ್ ಕರೆಯುವು ದನ್ನು ಕೂಡಲೇ ಸ್ಥಗಿತಗೊಳಿಸ ಬೇಕು. 15-20 ವರ್ಷಗಳ ಹಿಂದೆ ಆಗಿರುವ ನೋಂದಣಿ ಆಧರಿಸಿ ಈಗ ಕಾರ್ಮಿಕರ ಕಾರ್ಡ್‌ಗಳನ್ನು ರದ್ದುಪಡಿಸುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಗಳನ್ನು ಒದಗಿಸಲು ಮುಂದಾಗಬೇಕು. ಹೆರಿಗೆ ಭತ್ಯೆ, ಹಿರಿಯ ಕಾರ್ಮಿಕರ ಪಿಂಚಣಿ, ಅಂತ್ಯಕ್ರಿಯೆ, ಅಪಘಾತ ಪರಿಹಾರವನ್ನು ಈವರೆಗೂ ಮಂಜೂರು ಮಾಡಿಲ್ಲ ಕೂಡಲೇ ಅದನ್ನು ಬಿಡುಗಡೆ ಮಾಡಬೇಕು. ಅರ್ಜಿ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. 

ಪ್ರತಿಭಟನೆಯಲ್ಲಿ ಯಾದಗಿರಿ , ಗುಲ್ಬರ್ಗ, ರಾಯಚೂರು, ಗದಗ, ಹಾವೇರಿ, ಉತ್ತರ ಕನ್ನಡ, ಧಾರವಾಡ ವಿವಿಧ ಜಿಲ್ಲೆಗಳ ಕಾರ್ಮಿಕರ ಸಂಘಗಳು ಭಾಗವಹಿಸಿದ್ದರು. ಅಶ್ವಥ್ ಮರಿಗೌಡ್ರ, ಶಿವು ರಾಠೋಡ, ಶಿವಕುಮಾರ ಬಂಡಿವಡ್ಡರ, ವಾಸು ಲಮಾಣಿ, ಮುಸ್ತಾಕ್ ನದಾಫ್, ಎಸ್.ಪಿ. ಕರಿಸೋಮನ ಗೌಡ್ರ, ಶರಣಪ್ಪ ರೊಟ್ಟಿ , ಶಿವಕುಮಾರ ಗೌಡ್ರ, ಬೀರಪ್ಪ ಡೊಳ್ಳ, ರಾಜು ದೊರೆ, ಈರಪ್ಪ ವಲ್ಕಂದಿನ್ನಿ , ವೆಂಕಟೇಶ್, ತಿಮ್ಮಪ್ಪ, ತಾಯಪ್ಪ , ರವಿರಾಜ್, ದೇವಿಂದ್ರ ಕಾಲವಾ, ಶಿವಾನಂದ ಅಸೊಟ್ಟಿ, ಲಕ್ಷ್ಮಣ್, ಶಂಕರ್ ಲಂಬಾಣಿ , ಜೋತಿ ಪತ್ತಾರ, ಶಭಿನಾ ಮೇಲಿನಮನಿ ಇನ್ನಿತರರಿದ್ದರು.

ವರದಿಗಾರ : ಶಿವು ರಾಠೋಡ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು