ವಿಜಯ ಸಂಘರ್ಷ ನ್:
ಹೊಸನಗರ: ಹೃದಯಾಘಾತಕ್ಕೆ 34 ವರ್ಷದ ವ್ಯಕ್ತಿ ಬಲಿಯಾದ ಘಟನೆ ಹೊಸನಗರ ತಾಲೂಕು ನಗರ ಹಿರೀಮನೆ ಎಂಬಲ್ಲಿ ಬುಧವಾರ ನಡೆದಿದೆ.ಹಿರೀಮನೆ ನಿವಾಸಿ ಗಿರೀಶ್ ಮೃತ ವ್ಯಕ್ತಿ.
ಗಿರೀಶ್ ಗೆ ಬುಧವಾರ ರಾತ್ರಿ ಎದೆ ನೋವು ಕಾಣಿಸಿಕೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.
2 ವರ್ಷದ ಹಿಂದೆಯಷ್ಟೇ ಮದುವೆ ಯಾಗಿದ್ದ ಗಿರೀಶ್, ತಿಂಗಳ ಹಿಂದೆ ಯಷ್ಟೇ ಗಂಡು ಮಗುವಿಗೆ ತಂದೆ ಯಾಗಿದ್ದರು ಎನ್ನಲಾಗಿದೆ.