ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಜೀವನಶೈಲಿಯಲ್ಲಿ ಸರಳ ಬದಲಾವಣೆ ಮಾಡಿಕೊಳ್ಳುವುದರಿಂದ ಔಷಧವಿಲ್ಲದೆ ಸಹ ಡಯಾಬಿಟಿಸ್ ನಿಯಂತ್ರಣ ಸಾಧ್ಯ ಎಂದು ಡಾ.ಪ್ರೀತಮ್ ಬಿ. ಹೇಳಿದರು.
ರೋಟರಿ ಕ್ಲಬ್ ರಿವರ್‌ಸೈಡ್ ಭವನದಲ್ಲಿ ಆರೋಗ್ಯದ ಮಹತ್ವ ಬಿಂಬಿಸುವ ಡಯಾಬಿಟಿಸ್ ರಿವರ್ಸಲ್ ವಿಷಯ ಕುರಿತು ಮಾತನಾಡಿ, ರೋಗ ಬಂದ ಮೇಲೆ ಮಾತ್ರ ಚಿಕಿತ್ಸೆ ಪಡೆಯುವುದಕ್ಕಿಂತ ಆರೋಗ್ಯ ಶಿಸ್ತಿನಿಂದಲೇ ಪರಿಹಾರ ಹುಡುಕಬೇಕು ಎಂದರು.
ಆಹಾರವೇ ಔಷದಿ ಕುರಿತ ವೈಜ್ಞಾನಿಕ ದೃಷ್ಟಿಕೋನವನ್ನು ಅತ್ಯಂತ ಸರಳವಾಗಿ ವಿವರಿಸಿದರು.ಪಿಪಿಟಿ ಪ್ರಸ್ತುತಿ, ಜೀವನದ ಉದಾಹರಣೆಗಳು, ಆರೋಗ್ಯದ ಮೂಲ ತತ್ವಗಳ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಕ್ಲಬ್ ರಿವರ್‌ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಮಾತನಾಡಿ, ಆರೋಗ್ಯವೇ ಬದುಕಿನ ಮೂಲ ಎನ್ನುವುದರನ್ನು ಅರಿತುಕೊಳ್ಳ ಬೇಕು. ಆಹಾರ ಮತ್ತು ಜೀವನಶೈಲಿಯ ಶಿಸ್ತಿನ ಕುರಿತು ಸರಳವಾಗಿ ಅನುಸರಿಸ ಬೇಕು ಎಂದರು.
ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಅವರು ಉತ್ತುಂಗ ಪತ್ರಿಕೆಯನ್ನು ಬಿಡುಗಡೆ ಮಾಡಿ ಕ್ಲಬ್‌ನ ಚಟುವಟಿ ಕೆಗಳ ಮೆಚ್ಚುಗೆ ವ್ಯಕ್ತಪಡಿಸಿದರು.
ವಲಯ ಸೇನಾನಿ ಎಸ್.ಪಿ.ಶಂಕರ್ ಅವರು ಸೇವೆಯೊಂದಿಗೆ ಆರೋಗ್ಯದ ಚಟುವಟಿಕೆಗಳು ಕುರಿತು ಮಾತನಾಡಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಕಾರ್ಯದರ್ಶಿ ನಿತಿನ್ ಯಾದವ್ ,ನಿಕಟಪೂರ್ವ ಅಧ್ಯಕ್ಷ ಎಂ.ಆರ್. ಬಸವರಾಜ್, ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷೆ ಶೀಲಾ ಸುರೇಶ್, ಕಾರ್ಯದರ್ಶಿ ರೂಪಾ ರವಿ, ಮಾಜಿ ಅಧ್ಯಕ್ಷ ಎಂ.ಪಿ. ಆನಂದ ಮೂರ್ತಿ, ಜಗನ್ನಾಥ್, ಎಂ.ನಾಗರಾಜ್, ಡಾ.ಎಚ್.ಎಲ್. ಮಹೇಂದ್ರ, ಸಿ.ಎನ್.ಮಲ್ಲೇಶ್, ಎಂ.ಆರ್.ಬಸವರಾಜ್, ಉದಯ ಕುಮಾರ್, ಯೋಗ ಕೇಂದ್ರದ ನಿತ್ಯ ಭಾಗಿಯಾಗುವ ಸದಸ್ಯರು ಹಾಗೂ ರೋಟರಿ ಸದಸ್ಯರಿದ್ದರು.
Tags
ಶಿವಮೊಗ್ಗ ವರದಿ