ಸೆ 15: ಇಂಜಿನಿಯರ್ಸ್ ಡೇ ಮತ್ತು ಡಾ:ಸರ್.ಎಂ.ವಿಶ್ವೇಶ್ವರಾಯ ರವರ ಜನ್ಮದಿನಾಚರಣೆ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಸೆ: 15 ರ ಸೋಮವಾರ ಬೆಳಗ್ಗೆ 10.30 ಕ್ಕೆ ಇಂಜಿನಿಯರ್ಸ್ ಡೇ ಮತ್ತು ಭಾರತ ರತ್ನ ಡಾ: ಸರ್ ಎಂ.ವಿಶ್ವೇಶ್ವರಾಯ ರವರ ಜನ್ಮದಿನಾಚರಣೆ ಹಾಗೂ ದಿ. ಟಿ.ವಿ. ನಾರಯಣ ಶಾಸ್ತ್ರ್ತಿಯವರ ಜನ್ಮಶತಮಾ ನೋತ್ಸವ ಆಚರಣೆ ಮತ್ತು ಕಾರ್ಯಕ್ರಮ ಏರ್ಪಡಿಸಲಾಗಿದೆ. 

ಜಿಲ್ಲೆಯಲ್ಲಿ ಕೈಗಾರಿಕೀಕರಣವು ಭಾರತೀಯ ಕೈಗಾರಿಕೆಗಳ ವಾಸ್ತುಶಿಲ್ಪಿ ದಿವಂಗತ ಸರ್ ಎಂ. ವಿಶ್ವೇಶ್ವರಯ್ಯ ಅವರ ಅವಧಿಯಲ್ಲಿ ಪ್ರಾರಂಭ ವಾಯಿತು ಅವರು 1923 ಮತ್ತು 1936 ರಲ್ಲಿ ಭದ್ರಾವತಿಯಲ್ಲಿ ಕ್ರಮವಾಗಿ ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್, ಮೈಸೂರು ಪೇಪರ್ ಮಿಲ್ಸ್ ಎಂಬ 2 ಬೃಹತ್ ಕೈಗಾರಿಕೆ ಗಳನ್ನು ಪ್ರಾರಂಭಿಸಿದರು.ಅವರು ಶಿವಮೊಗ್ಗದಲ್ಲಿ ಶ್ರೀಗಂಧದ ಮರದ ಎಣ್ಣೆ ಉದ್ಯಮವನ್ನು ಪ್ರಾರಂಭಿಸಿದರು. ನಂತರ ಅನೇಕ ಮಹನೀಯರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಫೌಂಡ್ರಿ ಘಟಕಗಳನ್ನು ಪ್ರಾರಂಭಿಸ ಲಾಯಿತು ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ ಪ್ರಮುಖ ಪಾಲು ಫೌಂಡ್ರಿ ವಲಯದಿಂದ ಬಂದಿದೆ.

 ಶಿವಮೊಗ್ಗ ವಿಶ್ವ ಆಟೋಮೊಬೈಲ್ ಉದ್ಯಮದ ಅಗತ್ಯಗಳನ್ನು ಪೂರೈಸುತ್ತಿದೆ. ಸುಮಾರು ಆಟೋ ಘಟಕಗಳು ತಮ್ಮ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿವೆ. ಐರನ್ ಕಾಸ್ಟಿಂಗ್ಸ್, ಉತ್ಪನ್ನ ಗಳಿಗೆ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ನೂರಾರು ಕೋಟಿ ರೂ.ಹೂಡಿಕೆಯ ಅನೇಕ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿದ್ದು, ಸಾವಿರಾರು ಜನರಿಗೆ ಉದ್ಯೋಗ ಒದಗಿಸುತ್ತಿವೆ. ಜಿಲ್ಲೆಯಲ್ಲಿ ಐಟಿ ಉದ್ಯಮವು ಅನೇಕ ತಂತ್ರಜ್ಞರಿಗೆ ಉದ್ಯೋಗವನ್ನು ಒದಗಿಸುತ್ತಿದೆ. ಜಿಲ್ಲೆಯಲ್ಲಿ ಜವಳಿ ಉದ್ಯಮ ಪವರ್, ಆಮ್ಲಜನಕ, ಹಾಲು ಮತ್ತು ಡೈರಿ ಉತ್ಪನ್ನಗಳು, ಪೇಪರ್ ಪ್ಯಾಕೇಜ್. ಖಾದಿ ಉತ್ಪನ್ನ ಶ್ರೀಗಂಧದ ಮರದ ಕೆತ್ತನೆ, ಪೀಠೋಪಕರಣಗಳು ಈ ಪ್ರದೇಶದಲ್ಲಿ ಪ್ರಸಿದ್ಧವಾಗಿವೆ.

ಶಿವಮೊಗ್ಗದ ಕೈಗಾರಿಕಾ ಅಭಿವೃದ್ಧಿ ಯೋಜನೆಯ ದೃಷ್ಟಿಕೋನವನ್ನು ಹಾಗೂ ನಿಜವಾದ ಕೈಗಾರಿಕಾ ಕ್ರಾಂತಿಯನ್ನು ಕೈಗಾರಿಕಾ ಪಿತಾಮಹ ದಿವಂಗತ ಶ್ರೀ ಟಿವಿ ನಾರಾಯಣ ಶಾಸ್ತ್ರಿ ಅವರು ಪ್ರಾರಂಭಿಸಿದರು. ಗ್ಯಾರೇಜ್ ಅಂಡ್ ಇಂಜಿನಿಯರಿಂಗ್ ವರ್ಕ್ ಶಾಪ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷರಾಗಿ ಸಾಗರ ರಸ್ತೆಯಲ್ಲಿ ಆಟೋ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಅವರ ಕೊಡುಗೆ ಅವಿಸ್ಮರಣೆಯ, ಅವರು ಅನೇಕ ನಿರುದ್ಯೋಗಿ ಯುವಕರನ್ನು ಸಾಮಾನ್ಯ ಎಂಜಿನಿಯ ರಿಂಗ್, ಆಟೋ-ಸರ್ವಿಸ್, ಕೃಷಿ ಉಪಕರಣಗಳು, ಟೈರ್ ರಿಟ್ರೇಡಿಂಗ್, ಟ್ರ್ಯಾಕ್ಟರ್ ಟ್ರೈಲರ್ ನಿರ್ಮಾಣ, ಆಟೋ ಘಟಕಗಳು, ಫೌಂಡ್ರಿ ಘಟಕಗಳನ್ನು ಪ್ರಾರಂಭಿಸಲು ಪ್ರೇರೇಪಿಸಿದರು.  

ಟಿವಿಎನ್ ರವರು ಮಲ್ನಾಡು ಪ್ರಾಂತ್ಯದ ಶಿವಮೊಗ್ಗ ನಗರವನ್ನು ದಕ್ಷಿಣ ಭಾರತ ದಲ್ಲಿಯೇ ಪ್ರಮುಖ ಕೈಗಾರಿಕಾ ಕೇಂದ್ರವನ್ನಾಗಿ ಮಾಡಿದರು. ಇವರು ಬಹುಮುಖ ಪ್ರತಿಭೆಯ ವಿಶೇಷ ವ್ಯಕ್ತಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷರಾಗಿ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ದ್ದಾರೆ ಇವರು ಗಳಿಸಿರುವ ಪ್ರಶಸ್ತಿಗಳು ಅಪಾರ ಭಾರತ ಸರ್ಕಾರ ದಿಂದ ಉದ್ಯೋಗ ರತ್ನ ಪ್ರಶಸ್ತಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಭಾರತ್ ಪೌoಡ್ರಿ,ಪಿಯರ್ ಲೈಟ್, ಪರ್ಫೆಕ್ಟ್ ಅಲಾಯ್ಸ್ ಇತ್ಯಾದಿ ಕಂಪನಿಗಳು ಅಂತರಾಷ್ಟ್ರೀಯ ಮನ್ನಣೆ ಪಡೆಯುವಂತಾ ಗಲು ಶಾಸ್ತ್ರೀಯ ಅವರ ಶ್ರಮ ಮತ್ತು ಮಾರ್ಗದರ್ಶನ ಕಾರಣವಾಗಿದೆ.

ಅಂದು ಜಿಲ್ಲಾಧಿಕಾರಿ ಗುರು ಹೆಗಡೆ ಯವರು ಕಾರ್ಯಕ್ರಮ ಉದ್ಘಾಟಿಸ ಲಿದ್ದು ಮುಖ್ಯ ಅತಿಥಿಗಳಾಗಿ ರುದ್ರಗೌಡರು ಉಪಸ್ಥಿತರಿದ್ದು ಅಧ್ಯಕ್ಷತೆ ಬಿ ಗೋಪಿನಾಥ್ ವಹಿಸಲಿದ್ದಾರೆ.

 2025 ನೇ ಸಾಲಿನ ಹೆಮ್ಮೆಯ ಕೈಗಾರಿಕಾ ಪ್ರಶಸ್ತಿಯನ್ನು ಮೂರು ಕೈಗಾರಿಕಾ ಸಂಸ್ಥೆಗಳಾದ M/s MEC WIRES, M/s SRI DURGA ALLOYS, & M/s PRAKASH SIGN SYSTEMS ರವರಿಗೆ ನೀಡಿ ಪುರಸ್ಕರಿ ಸಲಾಗುವುದು, ಹಾಗೂ ಶ್ರೀ ಎಂ ರಾಜು ರವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು, ಜೊತೆಗೆ ಶ್ರೀ ಸಂತೋಷ್ ಬಿ ಮತ್ತು ವಿಜಯ್ ಪಿ ಕೆ, ಇಬ್ಬರು ಉತ್ತಮ ಕಾರ್ಮಿಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ -ಕ್ವಿಜ್ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಗಳಿಗೆ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯರ ಬಗ್ಗೆ ಭಾಷಣ ಸ್ಪರ್ಧೆ ಕಾರ್ಯಕ್ರಮ ಏರ್ಪಡಿ ಸಲಾಗಿತ್ತು, ವಿಜೇತರಿಗೆ ಅಂದು ನಗದು ಬಹುಮಾನ ನೀಡಿ, ಶಾಲೆಗಳಿಗೆ ಪಾರಿತೋಷಕ ನೀಡಲಾಗುವುದು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷರಾದ ಬಿ ಗೋಪಿನಾಥ್, ಉಪಾಧ್ಯಕ್ಷರದ ಜಿ ವಿಜಯ್ ಕುಮಾರ್ ಕಾರ್ಯದರ್ಶಿ ಎಮ್ ಸುರೇಶ್, ಖಜಾಂಚಿ ಹರ್ ಮನೋಹರ, ನಿರ್ದೇಶಕ ರಾದ ಎಸ್ ಎಸ್ ಉದಯಕುಮಾರ್, ಜಿ ವಿ ಕಿರಣ್ ಕುಮಾರ್, ವಸಂತ ಹೋಬಳಿ ದಾರ್, ಗಣೇಶ ಎಂ ಅಂಗಡಿ, ರವಿಪ್ರಕಾಶ್ ಜನ್ನಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು