ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತುಂಬಿದ ಭದ್ರಾ ಜಲಾಯಶ ರೈತರ ಜೀವನಕ್ಕೆ ಸುಭದ್ರತೆ ನೀಡಿದ್ದು, 5 ಜಿಲ್ಲೆಗಳ ರೈತರಿಗೆ ಇದು ಜೀವನಾಡಿ ಆಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕರ್ನಾಟಕ ಸರ್ಕಾರ ಜಲ ಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಬಿ.ಆರ್. ಪ್ರಾಜೆಕ್ಟನಲ್ಲಿ ಭದ್ರಾ ಜಲಾಶಯ ಬಾಗಿನ ಸಮರ್ಪಣೆ ಹಾಗೂ ನೂತನ ಪ್ರವಾಸಿ ಮಂದಿರವನ್ನು ಉದ್ಘಾಟಿಸಿ ಮಾತನಾಡಿದರು.
ಭದ್ರಾ ಜಲಾಶಯ ತುಂಬಿರುವುದ ರಿಂದ ಬಯಲು ಸೀಮೆಯಭದ್ರಾವತಿ-ತುಂಬಿದ ಭದ್ರಾ ಜಲಾಯಶಕ್ಕೆ ಡಿಸಿಎಂ ಡಿಕೆಶಿ ಬಾಗಿನ ಸಮರ್ಪಣೆ ರೈತರಿಗೆ ಅನುಕೂಲವಾಗಿದೆ. 60 ವರ್ಷಗಳ ಹಿಂದೆ ರೈತರ ಹಿತದೃಷ್ಟಿ ಯಿಂದ ಸರ್ ಎಂ. ವಿಶ್ವೇಶ್ವರಯ್ಯವರು ಈ ಜಲಾಶಯವನ್ನು ಸ್ಥಾಪನೆ ಮಾಡಿದ್ದು, 1945 ಜಲಾಶಯ ನಿರ್ಮಾಣ ಮಾಡವ ಬಗ್ಗೆ ಸಮೀಕ್ಷೆಯ ನಡೆಸಿ, 1965 ರಲ್ಲಿ ಅದನ್ನು ಕಾರ್ಯ ರೂಪಕ್ಕೆ ತಂದರು ಎಂದು ಹೇಳಿದರು.
ಕುಡಿಯುವ ನೀರಿನ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ. ಈ ಬಗ್ಗೆ ರೈತ ಮುಖಂಡರನ್ನ ಕರೆಸಿ ಮಾತಾಡು ತ್ತೇವೆ. ಇನ್ನೂ ಮಹಾದಾಯಿ ಯೋಜನೆಗೆ ಕೇಂದ್ರ ಒಪ್ಪಿಗೆ ನೀಡಿಲ್ಲ. ಅನುಮತಿ ಕೊಟ್ಟರೆ ಕೆಲಸ ಆರಂಭಿಸುತ್ತೇವೆ ಎಂದರು.