ಭದ್ರಾವತಿ-ಅ: 4 ರಂದು ಅರಕೆರೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: CSR ಚಟುವಟಿಕೆಯ ಅಡಿ ಯಲ್ಲಿ SAIL-VISL ಆಸ್ಪತ್ರೆ, ಶಿವಮೊಗ್ಗದ ಸಹ್ಯಾದ್ರಿ ನಾರಾಯಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ,ತಾಲ್ಲೂಕು ಸಾರ್ವಜನಿಕ ಆಸತ್ರೆ ಹಾಗೂ ಅರಕೆರೆ ಗ್ರಾಮ ಪಂಚಾಯಿತಿ ಇವರುಗಳ ಸಹ ಯೋಗ ದಲ್ಲಿ ಅ: 4 ರ ಶನಿವಾರ ಬೆಳಗ್ಗೆ 9.00 ರಿಂದ ಮಧ್ಯಾಹ್ನ 2.00ರ ವರೆಗೆ ಅರಕೆರೆ ಗ್ರಾಮದ ಪ್ರೌಢಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಶಿಬಿರದಲ್ಲಿ ತಜ್ಞ ವೈದ್ಯರುಗಳಿಂದ ಸಾಮಾನ್ಯ ಆರೋಗ್ಯ ತಪಾಸಣೆ, ಹೃದಯ ತಪಾಸಣೆ, ಕಣ್ಣಿನ ತಪಾಸಣೆ, ಮೂಳೆ ತಪಾಸಣೆ,ಹಲ್ಲು/ ದಂತ ತಪಾಸಣೆ, ರಕ್ತದೊತ್ತಡ (ಬಿ.ಪಿ),ಸಕ್ಕರೆ (ಮಧುಮೇಹ) ತಪಾಸಣೆ,ನರರೋಗ ತಪಾಸಣೆ, ಸ್ತ್ರೀರೋಗ ತಜ್ಞರಿಂದ ತಪಾಸಣೆ, 2D Echo ಮತ್ತು ECG ಮಾಡಲಾಗುವುದು.

ಇದೆ ಸಂದರ್ಭದಲ್ಲಿ ವಿಐಎಸ್‌ಎಲ್‌ ಕಾರ್ಖಾನೆ ವತಿಯಿಂದ ಉಚಿತ ಔಷಧ, ಪಪ್ಪಾಯ ಮತ್ತು ನುಗ್ಗೆ ಬೀಜಗಳನ್ನು ಉಚಿತವಾಗಿ ವಿತರಿಸಲಾಗುವುದು. 

ಗ್ರಾಮಸ್ಥರು/ ಸಾರ್ವಜನಿಕರು ಈ ಶಿಬಿರದ ಸದುಪಯೋಗಪಡಿಸಿ ಕೊಳ್ಳಲು ಕಾರ್ಖಾನೆಯ ಮಹಾ ಪ್ರಬಂಧಕರು (ಸಾರ್ವಜನಿಕ ಸಂಪರ್ಕ) ಎಲ್.ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು