ಭದ್ರಾವತಿ-ಹದಗೆಟ್ಟ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಹದಗೆಟ್ಟ ರಸ್ತೆಗಳ ದುರಸ್ತಿ ಗಾಗಿ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮಂಡಲದವತಿ ಯಿಂದ ಬುಧವಾರ ಬಸ್ ಹಾಗೂ ರೈಲ್ವೆ ನಿಲ್ದಾಣ ಸಮೀಪದಲ್ಲಿ ರಸ್ತೆ ಗುಂಡಿ ಗಳನ್ನು ಮುಚ್ಚುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. 

ಮಂಡಲ ಅಧ್ಯಕ್ಷ ಧರ್ಮ ಪ್ರಸಾದ್, ಮಾತನಾಡಿ ಗ್ಯಾರಂಟಿ ನೆಪದಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಗ್ಯಾರಂಟಿಯನ್ನು ನೀಡದೆ ಯಾವುದೇ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳದೆ ಜನ ಹಿತ ಮರೆತಿರುವುರಿಂದ ಸಿಎಂ ರಾಜೀನಾಮೆಗೆ ಒತ್ತಾಯಿಸಿದರು.

ಭ್ರಷ್ಟ ಸರ್ಕಾರದ ಕಾರ್ಯಕರ್ತನಿಂದ ಹಿಡಿದು ಸಿಎಂ ವರೆಗೆ ಹಗರಣದಲ್ಲಿ ತೊಡಗಿಸಿಕೊಂಡಿದ್ದಾರೆ.‌ ವಾಲ್ಮೀಖಿ ನಿಗಮದ ಹಗರಣವನ್ನ ಸಿಎಂ ಸ್ವತಃ ತೆಗೆದುಕೊಂಡಿದ್ದಾರೆ. ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದರು. ಹಣಕಾಸು ಸಚಿವರಾಗಿ ಸಿಎಂ ವಿರುದ್ಧ ಏನೂ ಕ್ರಮವಾಗಲಿಲ್ಲ.‌ ಮೂಡ ಹಗರಣ ದಲ್ಲಿಯೂ ಸಿಎಂ ವಿರುದ್ಧ ಕ್ರಮ ಆಗಲಿಲ್ಲ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಚೆನ್ನೇಶ್, ರಘು ರಾವ್, ಮೊಸರಳ್ಳಿ ಅಣ್ಣಪ್ಪ, ವಿಶ್ವನಾಥರಾವ್, ಧನುಷ್ ಬೋಸ್ಲೆ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು