ಭದ್ರಾವತಿ-ಕೊಲೆ ಪ್ರಕರಣ 8 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಹೊಸಮನೆ ಹನುಮಂತ ನಗರದಲ್ಲಿ ಹಣಕಾಸು ಹಾಗು ಹಳೇದ್ವೇಷದ ಹಿನ್ನಲೆಯಲ್ಲಿ ಕಳೆದ 5 ವರ್ಷಗಳ ಹಿಂದೆ ನಡೆದಿದ್ದ ಯುವಕ ನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿ ಸಿದಂತೆ 8 ಜನ ಆರೋಪಿಗಳಿಗೆ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೆ: 29 ರಂದು ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಹನುಮಂತನಗರದ ಯುವಕ ಶಾರುಖ್ ಖಾನ್‌(26) ಮತ್ತು ರಮೇಶ ಅಲಿ ಯಾಸ್ ಹಂದಿ ರಮೇಶ ಮತ್ತಿತರರಿಗೂ ಹಣಕಾಸಿನ ವಿಚಾರ ಹಾಗು ಹಳೇ ದ್ವೇಷದ ಹಿನ್ನಲೆಯಲ್ಲಿ ಸೆ.30, 2020ರ ರಾತ್ರಿ ಗಲಾಟೆಯಾಗಿತ್ತು. ಮೊದಲು ಶಾರುಖ್ ಖಾನ್‌ಗೆ ಅವರ ಮನೆಯ ಬಳಿ ಬಂದು ಜೀವಬೆದರಿಕೆ ಹಾಕಿ ತೆರಳಿದ್ದ ಗುಂಪು ನಂತರ ಶಾರುಖ್ ಖಾನ್‌ ನನ್ನು ಕೊಲೆ ಮಾಡಿತ್ತು. ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್‌ ಠಾಣೆ ದೂರು ದಾಖಲಾಗಿತ್ತು.

ಅಂದಿನ ತನಿಖಾಧಿಕಾರಿಯಾಗಿದ್ದ ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಯವರು ತನಿಖೆ ಕೈಗೊಂಡು ಆರೋಪಿತ ರಾದ ರಮೇಶ ಅಲಿಯಾಸ್ ಹಂದಿ ರಮೇಶ (44), .ವೆಂಕಟರಾಮ(35), ಚಂದ್ರ (37), ಕಾರ್ತಿಕ್‌(24), ಮಧುಸೂದನ್‌ (28), ರಮೇಶ(37), ನಾಗರಾಜ(25) ಮತ್ತು ಸಿದ್ದಪ್ಪ(48) ವಿರುದ್ಧ ನ್ಯಾಯಾಲ ಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ ರವರು ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಸೆ.29 ರಂದು ಎಲ್ಲಾ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು